ಓಟ್ಸ್ ಪ್ಯಾಕೆಟ್ ನಲ್ಲಿ ಹುಳು, ಹುಪ್ಪಟೆ ಪತ್ತೆ

ಗ್ರಾಹಕರೊಬ್ಬರು ಖರೀದಿಸಿದ ಓಟ್ಸ್ ಪ್ಯಾಕೆಟ್ ನಲ್ಲಿ ಹುಳು-ಹುಪ್ಪಟೆಗಳು ಕಂಡುಬಂದು ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ...
ಓಟ್ಸ್ ಪ್ಯಾಕೆಟ್
ಓಟ್ಸ್ ಪ್ಯಾಕೆಟ್

ಸೇಲಂ:ಗ್ರಾಹಕರೊಬ್ಬರು ಖರೀದಿಸಿದ ಓಟ್ಸ್  ಪ್ಯಾಕೆಟ್ ನಲ್ಲಿ ಹುಳು-ಹುಪ್ಪಟೆಗಳು ಕಂಡುಬಂದು ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿರುವ ಘಟನೆ ಮಂಗಳವಾರ ತಮಿಳುನಾಡಿನ ಸೇಲಂ ನಲ್ಲಿ ನಡೆದಿದೆ.

ಗ್ರಾಹಕರು ನೀಡಿದ ದೂರಿನ ಮೇರೆಗೆ ಜಿಲ್ಲಾ ಆರೋಗ್ಯ ಮತ್ತು ಸುರಕ್ಷತಾ ಪ್ರಾಧಿಕಾರದ ಅಧಿಕಾರಿ ಡಾ. ಅನುರಾಧ ಅವರು, ಓಟ್ಸ್ ನ ಮಾದರಿಯನ್ನು ಮಾಲ್ ವೊಂದರಿಂದ ಪಡೆದು ಪರೀಕ್ಷೆಗೆ ಕಳುಹಿಸಿದ್ದಾರೆ.

ಮಾಲ್ ನಿಂದ ಖರೀದಿಸಿದ ಮೂರು ಓಟ್ಸ್ ಪ್ಯಾಕೆಟ್ ಗಳಲ್ಲಿ ಒಂದು ಪ್ಯಾಕೆಟ್ ನ್ನು ತೆರೆದಾಗ ಅದರಲ್ಲಿ ಹುಳು ಹುಪ್ಪಟೆಗಳಿದ್ದವು. ಇದನ್ನು ಮಾಲ್ ನ ಸಿಬ್ಬಂದಿಗಳ ಗಮನಕ್ಕೆ ತಂದಾಗ ಅವರು ತಮಗೆ ಬೈದು ಹಲ್ಲೆ ನಡೆಸಲು ಮುಂದಾದರು ಎಂದು ಗ್ರಾಹಕರು ಆರೋಪಿಸಿದ್ದಾರೆ.

ಓಟ್ಸ್ ಮಾದರಿಯ ರಾಸಾಯನಿಕ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಪರೀಕ್ಷೆಯಲ್ಲಿ ಕಲಬೆರಕೆ ಪತ್ತೆಯಾದರೆ ಮಾಲ್ ನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಪ್ರಕರಣದ ನಂತರ ಬೇರೆ ಅಂಗಡಿಗಳಿಂದಲೂ ಓಟ್ಸ್ ಮಾದರಿಯ ಸ್ಯಾಂಪಲ್ ಗಳನ್ನು ಪಡೆದುಕೊಳ್ಳಲಾಗಿದೆ ಎಂದು ಅನುರಾಧ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com