ಹುಟಗಿ-ಕೂಡಗಿ-ಗದಗ ಜೋಡಿ ಹಳಿ ರೈಲು ಮಾರ್ಗಕ್ಕೆ ಕೇಂದ್ರ ಸಂಪುಟ ಸಮಿತಿ ಒಪ್ಪಿಗೆ

ಹುಟಗಿ-ಕೂಡಗಿ-ಗದಗ ರೈಲ್ವೆ ಮಾರ್ಗವನ್ನು ಡಬಲ್ ಟ್ರ್ಯಾಕ್ (ಜೋಡಿ ಹಳಿ ರೈಲು ಮಾರ್ಗ) ಮಾಡುವುದಕ್ಕೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಒಪ್ಪಿಗೆ ಸೂಚಿಸಿದೆ.
ಹುಟಗಿ-ಕೂಡಗಿ-ಗದಗ  ಜೋಡಿ ಹಳಿ ರೈಲು ಮಾರ್ಗಕ್ಕೆ ಕೇಂದ್ರ ಸಂಪುಟ ಸಮಿತಿ ಒಪ್ಪಿಗೆ
ಹುಟಗಿ-ಕೂಡಗಿ-ಗದಗ ಜೋಡಿ ಹಳಿ ರೈಲು ಮಾರ್ಗಕ್ಕೆ ಕೇಂದ್ರ ಸಂಪುಟ ಸಮಿತಿ ಒಪ್ಪಿಗೆ

ನವದೆಹಲಿ: ಹುಟಗಿ-ಕೂಡಗಿ-ಗದಗ  ರೈಲ್ವೆ ಮಾರ್ಗವನ್ನು ಡಬಲ್ ಟ್ರ್ಯಾಕ್ (ಜೋಡಿ ಹಳಿ ರೈಲು ಮಾರ್ಗ) ಮಾಡುವುದಕ್ಕೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಒಪ್ಪಿಗೆ ಸೂಚಿಸಿದೆ.

ಸುಮಾರು 1,618 ಕೋಟಿಯಿಂದ ರಿಂದ 2 058 ಕೋಟಿಯ ಅಂದಾಜು ವೆಚ್ಚದಲ್ಲಿ ರೈಲ್ವೆ ಮಾರ್ಗವನ್ನು ಡಬಲ್ ಟ್ರ್ಯಾಕ್ ಮಾಡಲಾಗುತ್ತದೆ ಎಂದು ಸಂಪುಟ ಸಮಿತಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಬೆಂಗಳೂರು- ಮುಂಬೈ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಹುಟಗಿ-ಕೂಡಗಿ-ಗದಗ ರೈಲು ಮಾರ್ಗ ಸಿಂಗಲ್ ಟ್ರ್ಯಾಕ್  ಹೊಂದಿದೆ. ರೈಲ್ವೆ  ಟ್ರ್ಯಾಕ್ ಡಬ್ಲಿಂಗ್ ಜೊತೆಗೆ ಹುಟಗಿ ಕೂಡಗಿ ಪ್ರದೇಶದಲ್ಲಿ ಏಕೀಕೃತ ಉಕ್ಕು ಸ್ಥಾವರಗಳು, ವಿದ್ಯುತ್ ಸ್ಥಾವರ, ಸಿಮೆಂಟ್ ಘಟಕಗಳು ಸಹ  ಪ್ರಾರಂಭವಾಗಲಿವೆ ಎಂದು ಸಿಸಿಇಎ ಸಭೆ ನಂತರ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಹುಟಗಿ-ಕೂಡಗಿ-ಗದಗ ಜೋಡಿ ಹಳಿ ರೈಲು ಮಾರ್ಗವನ್ನಾಗಿಸುವುದರಿಂದ ಈ ಪ್ರದೇಶದಲ್ಲಿ ಹೆಚ್ಚುವರಿ ರೈಲುಗಳು ಸಂಚರಿಸುವುದಕ್ಕೆ ಅನುಕೂಲವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com