ಮಣಿಪುರವನ್ನು 2 ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಭಜಿಸಲು ಆಗ್ರಹ

ಮಣಿಪುರದಲ್ಲಿ ಉಂಟಾಗಿರುವ ಹಿಂಸಾಚಾರವನ್ನು ತಡೆಗಟ್ಟಲು ಮಣಿಪುರವನ್ನು 2 ಕೆಂದ್ರಾಡಳಿತ ಪ್ರದೇಶವನ್ನಾಗಿ ವಿಭಜಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಮಣಿಪುರ
ಮಣಿಪುರ
Updated on

ನವದೆಹಲಿ: ಮಣಿಪುರ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ವಿವಿಧ ಮೂರು ಮಸೂದೆಗಳಿಗೆ ಅಂಗೀಕಾರ ನೀಡಿರುವುದರಿಂದ ಉಂಟಾಗಿರುವ ಹಿಂಸಾಚಾರವನ್ನು ತಡೆಗಟ್ಟಲು ಮಣಿಪುರವನ್ನು 2 ಕೆಂದ್ರಾಡಳಿತ ಪ್ರದೇಶವನ್ನಾಗಿ ವಿಭಜಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಎದುರಾಗಿರುವ ಬಿಕ್ಕಟ್ಟಿನ ಬಗ್ಗೆ ಈಶಾನ್ಯ ರಾಜ್ಯದ ಬುಡಕಟ್ಟು ಜನಾಂಗಕ್ಕೆ ಸೇರಿದ ಸಂಸದರು ಆತಂಕ ವ್ಯಕ್ತಪಡಿಸಿದ್ದು, ಹಿಂಸಾಚಾರ ತಡೆಗಟ್ಟುವುದಕ್ಕೆ ಈಗಿನ ಮಣಿಪುರವನ್ನು ಮತ್ತೆ 2 ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಭಜಿಸುವುದೊಂದೇ ಮಾರ್ಗ ಎಂದು ಹೇಳಿದ್ದಾರೆ. ಸಂಸದರ ಪ್ರಸ್ತಾವನೆ ಕಾರ್ಯರೂಪಕ್ಕೆ ಬಂದರೆ ಮಣಿಪುರ ರಾಜ್ಯವನ್ನು ಹೊರತುಪಡಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳು ಅಸ್ಥಿತ್ವ ಬರಲಿವೆ.

ರಾಜ್ಯ ಸರ್ಕಾರ ಮಣಿಪುರ ಜನರ ಸುರಕ್ಷತೆ ಕಾಯ್ದೆ 2015, ಮಣಿಪುರ ಭೂ ಕಂದಾಯ ಮತ್ತು ಜಮೀನು ಸುಧಾರಣೆ ಕಾಯ್ದೆ 2015 (ಏಳನೇ ತಿದ್ದುಪಡಿ) ಹಾಗೂ ಮಣಿಪುರ ಅಂಗಡಿ ಮುಂಗಟ್ಟೆ ಕಾಯ್ದೆ 2015(ಎರಡನೇ ತಿದ್ದುಪಡಿ) ಮೂರು ಕಾಯ್ದೆಗಳಿಗೆ ಅಂಗೀಕಾರ ನೀಡಿತ್ತು. ಕಾಯ್ದೆಗೆ ರಾಜ್ಯಪಾಲರು ಅಂಕಿತ ಹಾಕಿದರೆ ಈಗಿನ ಹಿಂಸಾಚಾರ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಮತ್ತೆರಡು ಕೇಂದ್ರಾಡಳಿತ ಪ್ರದೇಶಗಳನ್ನು ಅಸ್ಥಿತ್ವಕ್ಕೆ ತರುವುದು ಸೂಕ್ತ ಎಂದು ಬುಡಕಟ್ಟು ಜನಾಂಗದ ಸಂಸದರು ಅಭಿಪ್ರಾಯಪಟ್ಟಿದ್ದಾರೆ.

ಈ ಮೂರೂ ಕಾಯ್ದೆಗಳು ಬುಡಕಟ್ಟು ಜನರ ರಕ್ಷಣೆಗಿರುವ 1947ರ ಮಣಿಪುರ ಬುಡಕಟ್ಟು ನಿರ್ದೇಶನ ಕಾಯ್ದೆಯ ವಿರುದ್ಧವಾಗಿವೆ ಎಂದು ಬುಡಕಟ್ಟು ನಾಗರಿಕ ಸಮಿತಿ ಗುಂಪುಗಳು ವಿರೋಧ ವ್ಯಕ್ತಪಡಿಸಿದ್ದವು. ಕಾಯ್ದೆಯನ್ನು ವಿರೋಧಿಸಿ ಉಂಟಾಗಿದ್ದ ಹಿಂಸಾಚಾರದಲ್ಲಿ ಈ ವರೆಗೂ 8 ಜನ ಮೃತಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com