ರೆಹಮಾನ್ ಘರ್ ವಾಪಸಿಗೆ ವಿಶ್ವಹಿಂದೂ ಪರಿಷತ್ ಸಲಹೆ
ರೆಹಮಾನ್ ಘರ್ ವಾಪಸಿಗೆ ವಿಶ್ವಹಿಂದೂ ಪರಿಷತ್ ಸಲಹೆ

ರೆಹಮಾನ್ ವಿರುದ್ಧ ಫತ್ವಾಗೆ ವಿಹೆಚ್ ಪಿ ಅಸಮಾಧಾನ: 'ಘರ್ ವಾಪಸಿ'ಗೆ ಸಲಹೆ

ಪ್ರವಾದಿ ಮುಹಮ್ಮದ್‌ ಕುರಿತ ಚಿತ್ರಕ್ಕೆ ಸಂಗೀತ ನೀಡಿರುವ ಸಂಬಂಧ ರೆಹಮಾನ್ ವಿರುದ್ಧ ವಿರುದ್ಧ ಹೊರಡಿಸಿರುವ ಫತ್ವಾ ಬಗ್ಗೆ ವಿಶ್ವ ಹಿಂದು ಪರಿಷತ್ ವಿಷಾದ ವ್ಯಕ್ತಪಡಿಸಿದೆ.

ನವದೆಹಲಿ: ಪ್ರವಾದಿ ಮೊಹಮ್ಮದ್ ಕುರಿತ ಚಿತ್ರಕ್ಕೆ ಸಂಗೀತ ನೀಡಿರುವ ಸಂಬಂಧ ರೆಹಮಾನ್ ವಿರುದ್ಧ ವಿರುದ್ಧ ಹೊರಡಿಸಿರುವ ಫತ್ವಾ ಬಗ್ಗೆ ವಿಶ್ವಹಿಂದೂ ಪರಿಷತ್ ವಿಷಾದ ವ್ಯಕ್ತಪಡಿಸಿದೆ. ಅಲ್ಲದೇ ಹಿಂದೂ ಧರ್ಮಕ್ಕೆ ಮರುಮತಾಂತರವಾಗುವಂತೆ ಎ.ಆರ್ ರೆಮಾನ್ ಗೆ ಸಲಹೆ ನೀಡಿದೆ.

ಫತ್ವಾ ಹೊರಡಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಹೆಚ್ ಪಿ ಜಂಟಿ ಕಾರ್ಯದರ್ಶಿ ಸುರೇಂದ್ರ ಜೈನ್, ರೆಹಮಾನ್ ಅವರು ಹಿಂದೂ ಧರ್ಮಕ್ಕೆ ವಾಪಸ್ಸಾದರೆ(ಘರ್ ವಾಪಸಿಯಾದರೆ) ಅವರನ್ನು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ. ವ್ಯಾಪಾರ ದೃಷ್ಟಿಯಿಂದ ರೆಹಮಾನ್ ಅವರು ಇಸ್ಲಾಂ ಗೆ ಮತಾಂತರಗೊಂಡಿದ್ದರು ಎಂದು ಜೈನ್ ಆರೋಪಿಸಿದ್ದಾರೆ.

ಪ್ರವಾದಿ ಮೊಹಮದ್ ಕುರಿತ ಚಿತ್ರಕ್ಕೆ ರೆಹಮಾನ್ ಅವರು ಸಂಗೀತ ನೀಡಿರುವುದನ್ನು ಸಮರ್ಥಿಸಿಕೊಂಡಿರುವ ಜೈನ್, ಫತ್ವಾ ಹೊರಡಿಸಿರುವುದು ವಿಷಾದನೀಯ ಎಂದು ಹೇಳಿದ್ದಾರೆ. ಅಲ್ಲದೇ ಹಿಂದೂ ಸಮಾಜ ರೆಹಮಾನ್ ಅವರ ಘರ್ ವಾಪಸಿಯನ್ನು ಎದುರುನೋಡುತ್ತಿದೆ. ಎಷ್ಟೇ ಫತ್ವಾ ಹೊರಡಿಸಿದರು ಅವರಿಗೆ ತೊಂದರೆಯಾಗದಂತೆ ಎಚ್ಚರ ವಹಿಸುತ್ತೇವೆ ಎಂದು ಜೈನ್ ಭರವಸೆ ನೀಡಿದ್ದಾರೆ.          

'ಮುಹಮ್ಮದ್‌ ಮೆಸೆಂಜರ್‌ ಆಫ್‌ ಗಾಡ್‌' ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿರುವ ರೆಹಮಾನ್‌ ವಿರುದ್ಧ ಮುಂಬಯಿ ಮೂಲದ ಸುನ್ನಿ ಮುಸ್ಲಿಂ ಸಂಘಟನೆ ರಜಾ ಅಕಾಡೆಮಿ ಕಳೆದ ವಾರ ಫತ್ವಾ ಹೊರಡಿಸಿತ್ತು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಎ.ಆರ್. ರೆಹಮಾನ್‌, ಸದುದ್ದೇಶದಿಂದ ಇರಾನಿನ ಖ್ಯಾತ ಚಿತ್ರ ನಿರ್ಮಾಕ ಮಜಿದ್‌ ಮಜಿದಿ ಅವರ ಚಿತ್ರಕ್ಕೆಸಂಗೀತ ನೀಡಿದ್ದೇನೆ ಹೊರತು ದ್ರೋಹ ಬಗೆಯುವ ಉದ್ದೇಶದಿಂದ ಅಲ್ಲ ಎಂದು ಸ್ಪಷ್ಟಪಡಿಸಿದ್ದರು.

Related Stories

No stories found.

Advertisement

X
Kannada Prabha
www.kannadaprabha.com