ಖಾತ್ರಿ ದಿನಗಳ ಹೆಚ್ಚಳ 150 ದಿನಗಳಿಗೆ ಏರಿಕೆಗೆ ನಿರ್ಧಾರ

ಬರಕ್ಕೆ ತುತ್ತಾಗಿರುವ ಪ್ರದೇಶಗಳಲ್ಲಿನ ಕಾರ್ಮಿಕರಿಗೆ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಯಡಿ ಕೆಲಸದ ದಿನಗಳನ್ನು ಈಗಿರುವ 100ರಿಂದ 150ಕ್ಕೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಬರಕ್ಕೆ ತುತ್ತಾಗಿರುವ ಪ್ರದೇಶಗಳಲ್ಲಿನ ಕಾರ್ಮಿಕರಿಗೆ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಯಡಿ ಕೆಲಸದ ದಿನಗಳನ್ನು ಈಗಿರುವ 100ರಿಂದ 150ಕ್ಕೆ ಹೆಚ್ಚಿಸಲಾಗಿದೆ.
ಬುಧವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷೆತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟಸಭೆಯಲ್ಲಿ ಮುಂಗಾರು ಕೊರತೆ ಕುರಿತು ಚರ್ಚೆ ನಡೆಸಿದ ನಂತರ ಕೆಲಸದ ದಿನಗಳನ್ನು ಹೆಚ್ಚಿಸುವ ನಿರ್ಧಾರ  ಕೈಗೊಳ್ಳಲಾಯಿತು. ಈ ಸಾಲಿನಲ್ಲಿ ಮುಂಗಾರು ಮಳೆ ಕೊರತೆ ಶೇ.15ನ್ನು ಮೀರಲಿದೆ. ಇದು ಮುಂಗಾರು ಬೆಳೆ ಮತ್ತು ಗ್ರಾಮೀಣ ಆದಾಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಸಂಪುಟ ಸಭೆ ಆತಂಕ ವ್ಯಕ್ತಪಡಿಸಿದೆ. ಕರ್ನಾಟಕ ಈಗಾಗಲೆ 30 ಜಿಲ್ಲೆಗಳ ಪೈಕಿ 27 ಜಿಲ್ಲೆಗಳನ್ನು ಬರಪೀಡಿತ ಎಂದು ಘೋಷಿಸಿದೆ. ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶ ಗಳು ಶೀಘ್ರದಲ್ಲಿ ಘೋಷಿಸುವ  ಸಾಧ್ಯತೆಗಳಿವೆ. ಈ ಹೊಸ ನಿರ್ಧಾರ ಪ್ರಸಕ್ತ ಸಾಲಿನ ಹಣಕಾಸು ವರ್ಷ ಅಂದರೆ ಏಪ್ರಿಲ್‍ನಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ತರಲು ಸಭೆ ಅನುಮೋದನೆ ನೀಡಿತು. ಇದು ಸರ್ಕಾರಗಳು ಬರ ಎಂದು ಘೋಷಿಸಿರುವ ಪ್ರದೇಶಗಳಲ್ಲಿ ಮಾತ್ರ ಜಾರಿಗೆ ಬರಲಿದೆ ಎಂದು ಸಚಿವ ಸಂಪುಟ ಸಭೆ ನಂತರ ಕೇಂದ್ರ ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇದರಿಂದ ರಾಜ್ಯಗಳು ಬರಪೀಡಿತ  ಪ್ರದೇಶ ಗಳಲ್ಲಿ ಕಾರ್ಮಿಕರಿಗೆ ಹೆಚ್ಚು ಕೆಲಸದ ದಿನಗಳನ್ನು ನೀಡಬಹುದಾಗಿದೆ. ಗ್ರಾಮೀಣ ಪ್ರದೇಶದ ಬಡವರಿಗೆ ಇದರಿಂದ ಅನುಕೂಲವಾಗಲಿದೆ. ಮಳೆ ಕೊರತೆಯಿಂದ ಕೃಷಿ ಕ್ಷೇತ್ರದಲ್ಲಿ ಕಳೆದು ಕೊಳ್ಳುವ  ಉದ್ಯೋಗಗಳನ್ನು ಇದರಿಂದ ಪಡೆಯಬಹು ದಾಗಿದೆ. ಸದ್ಯಕ್ಕೆ ಗ್ರಾಮೀಣ ಜನರಲ್ಲಿ ಸೃಷ್ಟಿ ಯಾಗುವ ಆತಂಕ ದೂರವಾಗಲಿದೆ ಎಂದಿದ್ದಾರೆ. ಈ ಹಿಂದೆ ಕೇಂದ್ರ ಸರ್ಕಾರ ಬೆಳೆದು ನಿಂತಿರುವ ಫಸಲು  ಉಳಿಸಿಕೊಳ್ಳುವುದಕ್ಕಾಗಿ ನೀರು ಹಾಯಿಸಲು ಸಬ್ಸಿಡಿ ದರದಲ್ಲಿ ಡೀಸೆಲ್ ಯೋಜನೆ ಪ್ರಕಟಿಸಿತ್ತು. ಬರ ಪೀಡಿತ ಜಿಲ್ಲೆಗಳಲ್ಲಿನ ರೈತರಿಗೆ ಬಿತ್ತನೆ ಬೀಜಕ್ಕೆ ನೀಡುವ ಸಬ್ಸಿಡಿ ಏರಿಕೆ ಮಾಡಿತ್ತು.

300 ಕ್ಲಸ್ಟರ್‍ಗಳ ಸ್ಥಾಪನೆ: ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವೆ ಸಂಪರ್ಕ ಕಲ್ಪಿಸಲು 300 ಗುಚ್ಚಗಳನ್ನು ಸ್ಥಾಪಿಸುವ ಶ್ಯಾಂ ಪ್ರಸಾದ್ ಮುಖರ್ಜಿ ಮಿಷನ್‍ಗೂ ಕೇಂದ್ರ ಸಚಿವ ಸಂಪುಟ ಅನುಮೋದನೆ  ನೀಡಿದೆ. ಈ ಯೋಜನೆಗಾಗಿ ರು.5,142.08 ಕೋಟಿ ಮೀಸಲಿರಿಸಿದೆ. ಈ ಮಿಷನ್ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಮೂಲಸೌಕರ್ಯ ನಿರ್ಮಾಣ ಯೋಜನೆಗಳ ನ್ನು ಕೈಗೊಳ್ಳಲಿದೆ. ಈ ಹಿಂದಿನ ಯುಪಿಎ ಆಡಳಿತ ಅವಧಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಗರ ಮೂಲಸೌಕರ್ಯ ಯೋಜನೆ (ಪಿಯುಆರ್‍ಎ) ಎಂದು ಪ್ರಕಟಿಸಲಾ ಗಿತ್ತು. ಇದೇ ಯೋಜನೆಗೆ ಎನ್‍ಡಿಎ ಸರ್ಕಾರ  ಹೆಸರು ಬದಲಿಸಿ ಜಾರಿಗೊಳಿಸಲು ಮುಂದಾಗಿದೆ.ಆರ್‍ಎಸ್‍ಎಸ್ ಸಂಸ್ಥಾಪಕರಾದ ಮುಖರ್ಜಿ ಅವರ ಹೆಸರಿಟ್ಟು ಜಾರಿಗೆ ತರುತ್ತಿರುವ ಈ ಯೋಜನೆಯಲ್ಲಿ ವಿಶೇಷ ಏನಿದೆ ಎಂಬ ಪ್ರಶ್ನೆಗೆ,
ಆಗ ಖಾಸಗಿ ವಲಯಕ್ಕೆ ಮಾತ್ರ ಯೋಜನೆ ಸೀಮಿತವಾಗಿತ್ತು. ಹಾಗಾಗಿ ವಿಫಲವಾಗಿತ್ತು. ಈಗ ಹೊಸ ರೂಪದಲ್ಲಿ ಜಾರಿಗೆ ತರಲಾಗುತ್ತಿದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಚೌಧರಿ
ಬೀರೇಂದ್ರ ಸಿಂಗ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com