ಗೋಹತ್ಯೆಯನ್ನು ತಡೆಯಲು ಇಸ್ಲಾಮಿಕ್ ವಿದ್ವಾಂಸರಿಂದ ಅಭಿಯಾನ

ಹೈದರಾಬಾದ್ ನ ಇಸ್ಲಾಮಿಕ್ ವಿದ್ವಾಂಸರು ಗೋಹತ್ಯೆಯನ್ನು ನಿಲ್ಲಿಸುವಂತೆ ಮುಸ್ಲಿಮರಿಗೆ ಕರೆ ನೀಡಿದ್ದಾರೆ.
ಗೋಹತ್ಯೆಯನ್ನು ತಡೆಯಲು ಇಸ್ಲಾಮಿಕ್ ವಿದ್ವಾಂಸರಿಂದ ಅಭಿಯಾನ
ಗೋಹತ್ಯೆಯನ್ನು ತಡೆಯಲು ಇಸ್ಲಾಮಿಕ್ ವಿದ್ವಾಂಸರಿಂದ ಅಭಿಯಾನ

ಹೈದರಾಬಾದ್: ಕೆಲ ರಾಜ್ಯಗಳಲ್ಲಿ ಗೋಮಾಂಸ ನಿಷೇಧ ಹಾಗೂ ಈದ್ ಹಬ್ಬದ ಪ್ರಯುಕ್ತ ಗೋಹತ್ಯೆ ವಿಷಯ ಚರ್ಚೆಯಾಗುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಹೈದರಾಬಾದ್ ನ  ಇಸ್ಲಾಮಿಕ್ ವಿದ್ವಾಂಸರು ಗೋಹತ್ಯೆಯನ್ನು ನಿಲ್ಲಿಸುವಂತೆ ಮುಸ್ಲಿಮರಿಗೆ ಕರೆ ನೀಡಿದ್ದಾರೆ.
ವಾಸ್ತವದ ಸ್ಥಿತಿ ಅರಿಯುವಂತೆ ಮುಸ್ಲಿಮರಿಗೆ ಕರೆ ನೀಡಿರುವ ಇಸ್ಲಾಮಿಕ್ ವಿದ್ವಾಂಸರು, ಗೋವಿನ ಬದಲು ಶರಿಯಾದಲ್ಲಿ ಒಪ್ಪಿಗೆ ನೀಡಿರುವ ಬೇರೆ ಪ್ರಾಣಿಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಗೋಹತ್ಯೆಯನ್ನು ಕೈಬಿಡುವುದರಿಂದ ಶಾಂತಿ ನೆಲೆಸುತ್ತದೆ ಹಾಗೆಯೇ ದವಾತ್-ಇ- ದೀನ್ ಗೂ ಅಡ್ಡಿಯುಂಟಾಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಗೋಹತ್ಯೆಯನ್ನು ನಿಷೆಧಿಸುವುದಕ್ಕಾಗಿ ಇಸ್ಲಾಮಿಕ್ ವಿದ್ವಾಂಸರು, ಸಾಮಾಜಿಕ ಜಾಲತಾಣ ಸೇರಿದಂತೆ ಹಲವು ರೀತಿಯಲ್ಲಿ ಅಭಿಯಾನ ಕೈಗೊಂಡಿದ್ದಾರೆ. ಯಾವುದೇ ಮುಸ್ಲಿಮರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು, ಹಾಗೂ ಗೋಹತ್ಯೆ ಮಾಡುವುದನ್ನು ನಿಲ್ಲಿಸಬೇಕು ಎಂದು ಸಯೀದ್ ಹುಸೇನ್ ಮದನಿ ಹೇಳಿದ್ದಾರೆ.    
ಪ್ರಸಿದ್ಧ ವ್ಯಕ್ತಿಗಳಾದ ಮಜ್ಲಿಸ್-ಇ-ತಮೀರ್-ಇ-ಮಿಲ್ಲತ್ ಅಧ್ಯಕ್ಷ ಮೊಹಮದ್ ಅಬ್ದುಲ್ ರಹೀಮ್ ಖುರೇಶಿ, ಅಖಿಲ ಭಾರತೀಯ ವಯಕ್ತಿಕ ಮುಸ್ಲಿಂ ಕಾನೂನು ಮಂಡಳಿ ಕಾರ್ಯದರ್ಶಿ ಮೌಲಾನಾ ಖಾಲಿದ್ ಸೈಫುಲ್ಲಾ  ರೆಹ್ಮಾನಿ ಈ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com