ನವದೆಹಲಿ: ಕಳೆದ ತಿಂಗಳು ಉದಾಂಪುರ್ ದಾಳಿಯಲ್ಲಿ ಬಂಧಿತನಾದ ಪಾಕಿಸ್ತಾನದ ಉಗ್ರ ಮೊಹಮ್ಮದ್ ನವೇದ್ ಯಾಕೂಬ್‌ಗೆ ತನ್ನ ಹೆತ್ತವರ ಜತೆ ಮಾತನಾಡಬೇಕೆಂಬ ಬಯಕೆಯಾಗಿದೆಯಂತೆ. ಈ ಬಗ್ಗೆ ಈತ ಜಮ್ಮುನಲ್ಲಿರುವ ವಿಶೇಷ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾನೆ.
ಸುದ್ದಿ ಮಾಧ್ಯಮವೊಂದರ ಪ್ರಕಾರ, ನವೇದ್ ಪಾಕಿಸ್ತಾನದಲ್ಲಿರುವ ತನ್ನ ಹೆತ್ತವರ ಜತೆ ಮಾತನಾಡಬೇಕೆಂದು ಇಚ್ಛೆ ವ್ಯಕ್ತಪಡಿಸಿದ್ದಾನೆ. ಅದಕ್ಕಾಗಿ ಆತ ಈಗಾಗಲೇ ಎನ್‌ಐಎಗೆ ತನ್ನ ಹೆತ್ತವರ ಫೋನ್ ನಂಬರ್‌ನ್ನೂ ನೀಡಿದ್ದಾನೆ.
ನ್ಯಾಯಾಧೀಶರೇ, ಹೆತ್ತವರ ನೆನಪು ಆಗಾಗ್ಗೆ ಬರುತ್ತಿದೆ. ಸುಮಾರು ದಿನದಿಂದ ನಾನು ಅವರ ಜತೆ ಮಾತನಾಡಲಿಲ್ಲ. ಅವರೊಂದಿಗೆ ಫೋನ್ ಮೂಲಕ ಮಾತನಾಡುವ ಅವಕಾಶ ಕೊಡಿ. ನಾನು ಎನ್‌ಐಎ ಗೆ ಈಗಾಗಲೇ ಫೋನ್ ನಂಬರ್ ನೀಡಿದ್ದೇನೆ ಎಂದು ನವೇದ್ ಹೇಳಿರುವುದಾಗಿ ಮಾಧ್ಯಮ ವರದಿ ಮಾಡಿದೆ.
ಆದಾಗ್ಯೂ, ನವೇದ್ ನೀಡಿದ ಆ ಫೋನ್ ನಂಬರ್ ಕಾರ್ಯವೆಸಗುತ್ತಿಲ್ಲ ಎಂದು ಎನ್‌ಐಎ ಹೇಳಿದೆ.