ಸನಾತನ ಸಂಸ್ಥಾ ನಿಷೇಧ ಗೊಂದಲ

ಮಹಾರಾಷ್ಟ್ರದ ವಿಚಾರವಾದಿ ಗೋವಿಂದ ಪಾನ್ಸರೆ ಹತ್ಯೆಯಲ್ಲಿ ಪಾತ್ರ ವಹಿಸಿದೆ ಎಂಬ ಆರೋಪ ಎದುರಿಸುತ್ತಿರುವ ಸನಾತನ ಸಂಸ್ಥೆಯನ್ನು ನಿಷೇಧಿಸುವ ವಿಚಾರದ ಬಗ್ಗೆ ಕಾಂಗ್ರೆಸ್ ನಾಯಕರಲ್ಲೇ ಗೊಂದಲ ಮೂಡಿ ದೆ. ಮಾಜಿ ಸಿಎಂ ಅಶೋಕ್ ಚವಾಣ್ ಸನಾತನ...
ಮಹಾರಾಷ್ಟ್ರದ ವಿಚಾರವಾದಿ ಗೋವಿಂದ ಪಾನ್ಸರೆ (ಸಂಗ್ರಹ ಚಿತ್ರ)
ಮಹಾರಾಷ್ಟ್ರದ ವಿಚಾರವಾದಿ ಗೋವಿಂದ ಪಾನ್ಸರೆ (ಸಂಗ್ರಹ ಚಿತ್ರ)

ಮುಂಬೈ: ಮಹಾರಾಷ್ಟ್ರದ ವಿಚಾರವಾದಿ ಗೋವಿಂದ ಪಾನ್ಸರೆ ಹತ್ಯೆಯಲ್ಲಿ ಪಾತ್ರ ವಹಿಸಿದೆ ಎಂಬ ಆರೋಪ ಎದುರಿಸುತ್ತಿರುವ ಸನಾತನ ಸಂಸ್ಥೆಯನ್ನು ನಿಷೇಧಿಸುವ ವಿಚಾರದ ಬಗ್ಗೆ
ಕಾಂಗ್ರೆಸ್ ನಾಯಕರಲ್ಲೇ ಗೊಂದಲ ಮೂಡಿ ದೆ. ಮಾಜಿ ಸಿಎಂ ಅಶೋಕ್ ಚವಾಣ್ ಸನಾತನ ಸಂಸ್ಥೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿದ್ದಾರೆ.

ಸನಾತನ ಸಂಸ್ಥಾ ಮೇಲೆ ನಿಷೇಧ ಹೇರಲು ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್-ಎನ್‍ಸಿಪಿ ಸರ್ಕಾರ ನಿರ್ಧರಿಸಿತ್ತು. ನಾಟಕ `ಅಮ್ಹಿ ಸತ್ಪುತೆ' ಪ್ರದರ್ಶನ ವಿರೋಧಿಸಿ 2008ರಲ್ಲಿ ಥಾಣೆಯ ಆಡಿಟೋರಿಯಂನ ಪಾರ್ಕಿಂಗ್‍ನಲ್ಲಿ ನಡೆಸಿದ ಸ್ಪೋಟ ಸಂಬಂಧ ಸಂಘಟನೆಯ ಕಾರ್ಯಕರ್ತರಾದ ವಿಕ್ರಂ ಭಾವೆ ಮತ್ತು ರಮೇಶ್ ಗಡ್ಕರಿಯನ್ನು ಬಂಧಿಸಿ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಆ ಬಳಿಕ ಸಂಘಟನೆ ನಿಷೇಧಿಸುವ ಪ್ರಸ್ತಾಪ ಸರ್ಕಾರದ ಮುಂದಿತ್ತು. ಆದರೆ, ಕೇಂದ್ರ ಗೃಹ ಸಚಿವಾಲಯ ಆ ಬೇಡಿಕೆ ತಿರಸ್ಕರಿಸಿತ್ತು ಎಂದು ಚವಾಣ್ ಹೇಳಿದ್ದಾರೆ. ಇದಕ್ಕೆ ಮಾಜಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿಷೇಧ ವಿಚಾರ ದಲ್ಲಿ ಚವಾಣ್ ಗಂಭೀರವಾಗಿದ್ದರೆ ನೇರವಾಗಿ ಕರೆ ಮಾಡಬಹುದಿತ್ತು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com