ನೇತಾಜಿ ತಮ್ಮ ಮಗಳನ್ನು ನೋಡಿದ್ದು ಒಂದೇ ಬಾರಿ

ದೇಶದ ಸ್ವಾತಂತ್ರ್ಯಕ್ಕಾಗಿ ಸಶಸ್ತ್ರ ಹೋರಾಟದ ಮಾರ್ಗ ಹಿಡಿದ ನೇತಾಜಿ ಸುಭಾಷ್‍ಚಂದ್ರ ಬೋಸ್ ತಮ್ಮ ಮಗಳು ಅನಿತಾಳನ್ನು ನೋಡಿದ್ದು ಒಂದೇ ಬಾರಿ. ಅದೂ ಆಕೆ ನಾಲ್ಕು ವಾರಗಳ ಹಸುಗೂಸಾಗಿದ್ದಾಗ...
ನೇತಾಜಿ ಸುಭಾಷ್‍ಚಂದ್ರ ಬೋಸ್ (ಸಂಗ್ರಹ ಚಿತ್ರ)
ನೇತಾಜಿ ಸುಭಾಷ್‍ಚಂದ್ರ ಬೋಸ್ (ಸಂಗ್ರಹ ಚಿತ್ರ)

ಕೋಲ್ಕತಾ: ದೇಶದ ಸ್ವಾತಂತ್ರ್ಯಕ್ಕಾಗಿ ಸಶಸ್ತ್ರ ಹೋರಾಟದ ಮಾರ್ಗ ಹಿಡಿದ ನೇತಾಜಿ ಸುಭಾಷ್‍ಚಂದ್ರ ಬೋಸ್ ತಮ್ಮ ಮಗಳು ಅನಿತಾಳನ್ನು ನೋಡಿದ್ದು ಒಂದೇ ಬಾರಿ. ಅದೂ ಆಕೆ ನಾಲ್ಕು ವಾರಗಳ ಹಸುಗೂಸಾಗಿದ್ದಾಗ!

ನೇತಾಜಿ ವಿಯೆನ್ನಾದಲ್ಲಿದ್ದ ಪತ್ನಿ ಎಮಿಲಿ ಸ್ಕೆಂಕಲ್‍ರನ್ನು 1943ರಲ್ಲಿ ಮತ್ತೆ ಭೇಟಿಯಾಗಬೇಕಿತ್ತು. ಆದರೆ, ಅದು ಸಾಧ್ಯವಾಗಲೇ ಇಲ್ಲ. ಪಶ್ಚಿಮ ಬಂಗಾಳ ಸರ್ಕಾರ ಶುಕ್ರವಾರ ಬಹಿರಂಗಪಡಿಸಿದ ರಹಸ್ಯ ದಾಖಲೆಗಳ ಮೂಲಕ ಈ ವಿಚಾರಗಳು ಬಹಿರಂಗವಾಗಿದೆ. ಬೋಸ್ ವಿಮಾನ ದುರಂತದ ಬಳಿಕ ಯುರೋಪ್‍ಗೆ ಹಿಂತಿರುಗಿರಲಿಲ್ಲ ಹಾಗೂ ಅವರ ಪತ್ನಿ ನೇತಾಜಿ ಕುಟುಂಬಕ್ಕೆ ನಿಯಮಿತ ವಾಗಿ ಪತ್ರ ಬರೆಯು ತ್ತಲೇ ಇದ್ದರು ಎನ್ನುವ ಮಾಹಿತಿಯೂ ಕಡತಗಳಲ್ಲಿ ದಾಖಲಾಗಿದೆ. ಮೇ 4, 1946ರಂದು ನೇತಾಜಿ ಕುಟುಂಬಕ್ಕೆ ಬರೆದ ಪತ್ರವೊಂದನ್ನು ಪಶ್ಚಿಮ ಬಂಗಾಳ ಸರ್ಕಾರದ ಬೇಹುಗಾರರು ಕದ್ದು ಓದಿದ್ದಾರೆ. ಆ ಪತ್ರದಲ್ಲಿ ಎಮಿಲಿ ತಮ್ಮನ್ನು ತಾವು ವಿಧವೆ ಎಂದು ಕರೆದುಕೊಂಡಿದ್ದರು.

ಆ ಪತ್ರದಲ್ಲಿ ತಮ್ಮ ಬೋಸ್ ಭೇಟಿಯ ವಿಚಾರವನ್ನು ಪ್ರಸ್ತಾಪಿಸಿದ್ದರು. ಪತಿಯ ಸಾವಿನ ಸುದ್ದಿ ಬೆಳಕಿಗೆ ಬರುತ್ತಿದ್ದಂತೆ ಬೋಸ್ ಕುಟುಂಬಕ್ಕೆ ಪತ್ರ ಬರೆದಿದ್ದ ಎಮಿಲಿ, ತಮ್ಮ ಮಗಳ ವಿವರವನ್ನು ನೀಡಿದ್ದರು. 2 ವರ್ಷಗಳ ಬಳಿಕ ಎಮಿಲಿ ಅವರು ಶರತ್‍ಚಂದ್ರಬೋಸ್ ಹಾಗೂ ಕುಟುಂಬ ವನ್ನು ವಿಯೆನ್ನಾದಲ್ಲಿ ಭೇಟಿಯಾಗಿದ್ದರು. ಮರುವರ್ಷ ಎಮಿಲಿ ಬರೆದ ಪತ್ರದಲ್ಲಿ ನಿಮ್ಮ ಸಹೋದರ ವಾಪ ಸಾಗಲಿ. ದೇವರಲ್ಲಿ ನಾನು ಮಾಡುತ್ತಿರುವ ಪ್ರಾರ್ಥನೆ ಇದೊಂದೇ ಎಂದಿದ್ದರು. ನೇತಾಜಿ ಕುಟುಂಬದ ಜತೆ ಮಾತಾಡಲೆಂದು ಪುತ್ರಿ ಅನಿತಾ ಇಂಗ್ಲಿಷ್ ಕಲಿಕೆಗೆ ತೋರಿಸು ತ್ತಿರುವ ಆಸಕ್ತಿಯ ಮಾಹಿತಿಯೂ ಎಮಿಲಿಯ ಪತ್ರಗಳಲ್ಲಿದೆ.

ಎಂಟು ದಿನಗಳಲ್ಲಿ 7 ಕರೆ: ಮಮತಾ ರಹಸ್ಯ ಕಡತ ಬಯಲು ಮಾಡಲಿದ್ದಾರೆ ಎಂಬ ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ಪ್ರಧಾನಿ ಕಚೇರಿ ಯಿಂದ ನೇತಾಜಿ ಕುಟುಂಬಕ್ಕೆ ಏಳು ಕರೆ ಹೋಗಿವೆ. ಅ.14ಕ್ಕೆ ನೇತಾಜಿ ಕುಟುಂಬವು ಪ್ರಧಾನಿ ಮೋದಿಯನ್ನು ಭೇಟಿಯಾಗಲು ನಿರ್ಧರಿಸಿದೆ. ಈ ವೇಳೆ ಯಾವ್ಯಾವ ವಿಚಾರ ಗಳ ಕುರಿತು ಮಾತುಕತೆ ನಡೆಸಬೇಕು ಎನ್ನುವ ಕುರಿತು ಮೊದಲೇ ಟಿಪ್ಪಣಿ ಸಿದಟಛಿಪಡಿಸುವಂತೆ ಪ್ರಧಾನಿ ಕಾರ್ಯಾಲಯದಿಂದ ಸೂಚನೆ ನೀಡಲಾಗಿದೆ. ನೇತಾಜಿ ಕುಟುಂಬದ 35 ಮಂದಿ, 14 ಸಂಶೋಧಕರು, ವಿದ್ವಾಂಸರು ಪ್ರಧಾನಿಯನ್ನು ಭೇಟಿಯಾಗಲಿದ್ದಾರೆ. ಈ ವೇಳೆ, ರಷ್ಯಾ, ಬ್ರಿಟನ್ ಸರ್ಕಾರದ ಬಳಿ ಇರುವ ದಾಖಲೆ ಬಹಿರಂಗಪಡಿಸುವಂತೆ ಮನವಿ ಮಾಡಲಾಗುವುದು.

ರೇಡಿಯೋದಲ್ಲಿ ಮಾತಾಡ ಬಯಸಿದ್ದರು ``ಕಳೆದೊಂದು ತಿಂಗಳಿಂದ ರೇಡಿಯೋದಲ್ಲಿ ವಿಚಿತ್ರ ಸಂದೇಶ ಕೇಳಿ ಬರುತ್ತಿದೆ. ನೇತಾ ಸುಭಾಷ್‍ಚಂದ್ರ ಟ್ರಾನ್ಸ್‍ಮಿಟರ್.... ನೇತಾಜಿ ಮಾತನಾಡಲು ಬಯಸುತ್ತಿದ್ದಾರೆ''- ನೇತಾಜಿ ಸಂಬಂಧಿ ಅಮಿಯಾ ನಾಥ್ ಬೋಸ್ 1949ರಲ್ಲಿ ಲಂಡನ್‍ನಲ್ಲಿದ್ದ ಶಿಶಿರ್ ಬೋಸ್‍ರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ ಮಾಹಿತಿ ಇದು. 16ಎಂಎಂನ ಕಡಿಮೆ ತರಂಗಾಂತರದ ಶಾರ್ಟ್‍ವೇವ್‍ನಲ್ಲಿ ಈ ಸಂದೇಶ ಕೇಳಿಬರುತ್ತಿದೆ. ಸುಮಾರು 1 ಗಂಟೆ ಕಾಲ ಈ ಸಂದೇಶ ಪುನರಾವರ್ತನೆಯಾಗಿದೆ. ಎಲ್ಲಿಂದ ಪ್ರಸಾರ ಆಗುತ್ತಿದೆ ಎನ್ನುವುದು ಗೊತ್ತಿಲ್ಲ. ಆ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ ಎಂದು ಅಮಿಯಾ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com