ಪ್ರಧಾನಿ ಮೋದಿ ಫೇಕು: ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರಮೋದಿ `ಫೇಕು' ಎಂದು ವಾಗ್ದಾಳಿ ನಡೆಸುವುದರೊಂದಿಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬಿಹಾರ ವಿಧಾನಸಭೆ ಚುನವಣಾ ಪ್ರಚಾರಕ್ಕೆಚಾಲನೆ ನೀಡಿದ್ದಾರೆ. ಬಿಹಾರದ ರಾಮ್ ನಗರದಲ್ಲಿ ಶನಿವಾರ ಆಯೋಜಿಸಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು...
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ (ಸಂಗ್ರಹ ಚಿತ್ರ)
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ (ಸಂಗ್ರಹ ಚಿತ್ರ)

ನವದೆಹಲಿ: ಪ್ರಧಾನಿ ನರೇಂದ್ರಮೋದಿ `ಫೇಕು' ಎಂದು ವಾಗ್ದಾಳಿ ನಡೆಸುವುದರೊಂದಿಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬಿಹಾರ ವಿಧಾನಸಭೆ ಚುನವಣಾ ಪ್ರಚಾರಕ್ಕೆ
ಚಾಲನೆ ನೀಡಿದ್ದಾರೆ. ಬಿಹಾರದ ರಾಮ್ ನಗರದಲ್ಲಿ ಶನಿವಾರ ಆಯೋಜಿಸಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಧಾನಿ ಮೋದಿ ಮತ್ತವರ ಸೂಟುಬೂಟಿನ ಗೆಳೆಯರಿಂದ ಬಿಹಾರವನ್ನು ರಕ್ಷಿಸಬೇಕಿದೆ ಎಂದು ವ್ಯಂಗ್ಯವಾಡಿದರು. ಪ್ರಧಾನಿ ನರೇಂದ್ರಮೋದಿ ಅವರನ್ನೇ ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ ರಾಹುಲ್, ``ಹಿಂದೆ ಮಹಾತ್ಮಗಾಂಧಿ ಸೂಟು ಬೂಟು ತೊಡುತ್ತಿದ್ದರು. ಬಡ ರೈತರು, ಕಾರ್ಮಿಕರಿಗಾಗಿ ಅವರು ಸೂಟು ಬೂಟು ತೊರೆದರು. ಮೋದಿ ಮಹಾತ್ಮಾ ಗಾಂಧೀಜಿ
ತತ್ವಕ್ಕೆ ತದ್ವಿರುದ್ಧವಾಗಿದ್ದಾರೆ. ಟೀ ಮಾರಾಟ ಮಾಡುತ್ತಿದ್ದ ಮೋದಿ ಪ್ರಧಾನಿಯಾದ ನಂತರ ರು.15 ಲಕ್ಷ ಮೊತ್ತದ ಸೂಟು ಧರಿಸುತ್ತಿದ್ದಾರೆ. ಅವರು ರೈತರ ಬಳಿ, ನಿರ್ಗತಿಕರ ಬಳಿ ಹೋಗುವುದಿಲ್ಲ. ಸೂಟು ಬೂಟು ತೊಟ್ಟವರ ಬಳಿ ಹೋಗುತ್ತಾರೆ'' ಎಂದರು.

``ನಾನು ಮತ್ತು ನನ್ನ ಸೂಟು ಬೂಟು ಹಾಕಿರುವ ಸ್ನೇಹಿತರು ಭಾರತವನ್ನು ಬದಲಾಯಿಸುತ್ತೇವೆ ಎಂದು ಪ್ರಧಾನಿ ಹೇಳಿದ್ದರು. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ. ರೈತರಿಗೆ ನೀಡುವ ಕನಿಷ್ಠ ಬೆಂಬಲ ಬೆಲೆಯನ್ನು ಶೇ.100ರಷ್ಟು ಹೆಚ್ಚಿಸುತ್ತೇವೆ. ಕಪ್ಪು ಹಣ ತಂದು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ರು.15ಲಕ್ಷ ಪಾವತಿ ಮಾಡುತ್ತೇವೆ'' ಎಂದರು. ನೀವೇ ಹೇಳಿ, ಯಾವುದನ್ನು ಅವರು ಮಾಡಿದ್ದಾರೆ ಎಂದು ಪ್ರಶ್ನಿಸಿದಾಗ, ಯಾವುದೂ ಇಲ್ಲ ಯಾವುದೂ ಇಲ್ಲ ಎಂದು ಸಬಿsಕರು ತಪ್ಪಾಳೆ ತಟ್ಟಿ ಹುರಿದುಂಬಿಸಿದರು.

ಯೋಚನೆಯೇ ಬೇರೆ: ಬಿಜೆಪಿ, ಆರ್‍ಎಸ್‍ಎಸ್ ಯೋಚಿಸುವ ರೀತಿಯೇ ಬೇರೆ. ಬಡವರಿಗೆ, ದುರ್ಬಲರಿಗೆ ಬುದ್ಧಿ ಶಕ್ತಿ ಇಲ್ಲ ಅಂದುಕೊಂಡಿದ್ದಾರೆ. ಅವರು ನಿಮ್ಮ ಬಳಿ ಬರುವುದೂ ಇಲ್ಲ. ನಿಮ್ಮೊಂದಿಗೆ ಬೆರೆಯುವುದೂ ಇಲ್ಲ. ಅವರ ಸೂಟುಗಳು ಸ್ವಚ್ಛವಾಗಿರಬೇಕೆಂದು ಬಯಸುತ್ತಾರೆ ಎಂದು ರಾಹುಲ್ ಲೇವಡಿ ಮಾಡಿದರು.

ಮಹಾಮೈತ್ರಿ ಅಂಗಪಕ್ಷವಾದ ಕಾಂಗ್ರೆಸ್ ವಿಧಾನಸಭಾ ಚುನಾವಣಾ ಪ್ರಚಾರ ಸಭೆಗೆ ಜೆಡಿಯು ನಾಯಕ ನಿತೀಶ್‍ಕುಮಾರ್, ಆರ್‍ಜೆಡಿ ನಾಯಕ ಗೈರಾಗಿದ್ದರು. ಇದೇ ವೇಳೆ, ಜೆಡಿಯು, ಆರ್‍ಜೆಡಿ ಮತ್ತು ಜೆಡಿಯು ಮೈತ್ರಿಕೂಟದ ಅಭ್ಯರ್ಥಿಗಳ ಪಟ್ಟಿ ಶನಿವಾರ ಪ್ರಕಟವಾಗಿದೆ. ಆರ್ ಜೆಡಿ ಮತ್ತು ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ಕಾಂಗ್ರೆಸ್ 41 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ಇದೇ ವೇಳೆ, ಆರ್‍ಜೆಡಿ ವತಿಯಿಂದ ಲಾಲು ಪುತ್ರ ತೇಜಸ್ವಿಗೂ ಟಿಕೆಟ್ ನೀಡಲಾಗಿದೆ. ಇದೇ ವೇಳೆ, ಬಿಜೆಪಿ 99 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com