ಅರುಣ್ ಜೇಟ್ಲಿ
ದೇಶ
ಮುಂದಿನ ಆರ್ಥಿಕ ವರ್ಷದಿಂದ ಜಿ.ಎಸ್.ಟಿ ಜಾರಿ: ಅರುಣ್ ಜೇಟ್ಲಿ ವಿಶ್ವಾಸ
ನೇರ ತೆರಿಗೆಗೆ ಸಂಬಂಧಿಸಿದ ವಿಷಯಗಳು ಇನ್ನೂ ಇತ್ಯರ್ಥವಾಗಬೇಕಿದ್ದರೂ, ಮುಂದಿನ ಆರ್ಥಿಕ ವರ್ಷದಿಂದ ಜಿ.ಎಸ್.ಟಿ(ಜಿ.ಎಸ್.ಟಿ) ಜಾರಿಗೊಳ್ಳಲಿದೆ
ಹಾಂಕ್ ಕಾಂಗ್: ನೇರ ತೆರಿಗೆಗೆ ಸಂಬಂಧಿಸಿದ ವಿಷಯಗಳು ಇನ್ನೂ ಇತ್ಯರ್ಥವಾಗಬೇಕಿದ್ದರೂ, ಮುಂದಿನ ಆರ್ಥಿಕ ವರ್ಷದಿಂದ ಜಿ.ಎಸ್.ಟಿ(ಜಿ.ಎಸ್.ಟಿ) ಜಾರಿಗೊಳ್ಳಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಹೊಸ ತೆರಿಗೆ ವಿಧಾನ ಜಾರಿಗೆ ಕಾಂಗ್ರೆಸ್ ವಿರೋಧಿಸುತ್ತಿದೆ. ಆದರೆ ಅದು ಆದಾಯ ತೆರಿಗೆ ಅಲ್ಲ, ವ್ಯವಹಾರ ತೆರಿಗೆ ಎಂಬುದನ್ನು ಕಾಂಗ್ರೆಸ್ ಅರ್ಥಮಾಡಿಕೊಳ್ಳಬೇಕು. ರಾಜ್ಯಸಭೆಯಲ್ಲಿ ಜಿಎಸ್.ಟಿ ಮಸೂದೆ ಅಂಗೀಕಾರವಾಗಲಿದೆ ಎಂದು ಹಾಂಕ್ ಕಾಂಗ್ ಗೆ ನಾಲ್ಕು ದಿನಗಳ ಪ್ರವಾಸ ಕೈಗೊಂಡಿರುವ ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಚೀನಾ ಆರ್ಥಿಕ ಹಿಂಜರಿತದ ಬಗ್ಗೆಯೂ ಮಾತನಾಡಿದ ಜೇಟ್ಲಿ, ಭಾರತದಲ್ಲಿ ಬಂಡವಾಳ ಹೂಡಿಕೆಗೆ ಚೀನಾಗೆ ಸ್ವಾಗತವಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ