ಶ್ರೀರಾಮ ಸೇನೆಯಿಂದ 15 ಮಂದಿಗೆ ನೋಟಿಸ್

ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ. 14ರಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಶ್ರೀರಾಮ ಸೇನೆಯ...
ಪ್ರಮೋದ್ ಮುತಾಲಿಕ್
ಪ್ರಮೋದ್ ಮುತಾಲಿಕ್

ಧಾರವಾಡ: ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ. 14ರಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಶ್ರೀರಾಮ ಸೇನೆಯ ಹೆಸರು ದಾಖಲಿಸಿದ ಕಾರಣಕ್ಕಾಗಿ 15 ಜನರಿಗೆ ಲೀಗಲ್ ನೋಟಿಸ್ ನೀಡಲಾಗಿದೆ.

ಅಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದ ಮನವಿಯಲ್ಲಿ ಶ್ರೀರಾಮ ಸೇನೆ ಹೆಸರು ದಾಖಲಿಸಲಾಗಿತ್ತು. ಆ ಮನವಿಯಲ್ಲಿ ಸಹಿ ಮಾಡಿದ 138 ಜನರಿಗೂ ನೋಟಿಸ್ ನೀಡಲು ತೀರ್ಮಾನಿಸಲಾಗಿತ್ತು. ಆದರೆ, ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ ಅವರು ತಮ್ಮನ್ನು ಸಂಪರ್ಕಿಸಿ ಮನವಿಯಲ್ಲಿ ಸಂಘಟನೆಯ ಹೆಸರು ಸೇರಿದ್ದು ತಮಗೆ ಗೊತ್ತಿಲ್ಲ.

ಸಂಯೋಜಕರು ತರಾತುರಿಯಲ್ಲಿ ಸಹಿ ಮಾಡಿಸಿಕೊಂಡರು. ಸಂಘಟನೆ ಹೆಸರು ಮನವಿಯಲ್ಲಿ ದಾಖಲಾಗಿದ್ದರೆ ಅದಕ್ಕೂ ತಮಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಡಾ.ಚೆನ್ನವೀರ ಕಣವಿ ಮತ್ತು ಡಾ. ಗಿರಡ್ಡಿ ಗೋವಿಂದರಾಜ ಅವರನ್ನು ಹೊರತು ಪಡಿಸಿ ಮೊದಲ ಹಂತದಲ್ಲಿ 15 ಜನರಿಗೆ ನೋಟಿಸ್ ರವಾನಿಸಲಾಗುತ್ತಿದೆ ಎಂದು ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಪತ್ರಿಕೆಗೆ ಸ್ಪಷ್ಟಪಡಿಸಿದ್ದಾರೆ.

ಮನಲಿಯಲ್ಲಿ ಸಹಿ ಮಾಡಿದ ಬಹಳಷ್ಟು ಜನರ ವಿಳಾಸ ದೊರೆತಿಲ್ಲ. ವಿಳಾಸ ಸಿಕ್ಕ ಕೂಡಲೇ ಅವರಿಗೂ ನೋಟಿಸ್ ಕಳುಹಿಸಲಾಗುವುದು. ಮೊದಲ ಹಂತದಲ್ಲಿ ಗದಗ ತೋಂಟದಾರ್ಯ ಮಠದ ಶ್ರೀಗಳು, ಸಾಹಿತಿಗಳಾದ ರಹಮತ್ ತರೀಕೆರೆ, ಶ್ಯಾಮಸುಂದರ ಬಿದರಕುಂದಿ, ಆರ್.ಕೆ. ಹುಡುಗಿ, ಕೆ. ನೀಲಾ, ಮೀನಾಕ್ಷಿ ಬಾಳಿ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಸೇರಿದಂತೆ 15 ಜನರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com