
ಸಾಂಬಾ: ಗಡಿ ವಿಸ್ತರಿಸುವ ಯಾವುದೇ ಮಹತ್ವಾಕಾಂಕ್ಷೆಯನ್ನು ಭಾರತ ಹೊಂದಿಲ್ಲ. ಆದರೆ ರಕ್ಷಣೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ಹೇಳಿದ್ದಾರೆ.
ರಾಜನಾಥ್ ಸಿಂಗ್ ಅವರು ಇಂದಿನಿಂದ ಮೂರು ದಿನಗಳ ಪಾಕಿಸ್ತಾನ ಹಾಗೂ ಚೀನಾ ಗಡಿ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದು, ನೆರೆ ರಾಷ್ಟ್ರಗಳೊಂದಿಗೆ, ವಿಶೇಷವಾಗಿ ಪಾಕಿಸ್ತಾನ ಮತ್ತು ಚೀನಾದೊಂದಿಗೆ ಭಾರತ ಉತ್ತಮ ಸಂಬಂಧವನ್ನು ಬಯಸುತ್ತದೆ ಮತ್ತು ಮಾತುಕತೆ ಮೂಲಕ ಗಡಿ ವಿವಾದ ಸೇರಿದಂತೆ ಇತರೆ ಎಲ್ಲಾ ವಿಷಯಗಳನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳಲು ಯತ್ನಿಸುತ್ತದೆ ಎಂದು ಹೇಳಿದ್ದಾರೆ.
'ಭಾರತ ಕೇವಲು ತನ್ನ ಗಡಿ ರಕ್ಷಿಸಲು ಬಯಸುತ್ತದೆ. ಗಡಿ ಅತಿಕ್ರಮಣ ಮತ್ತು ಅಕ್ರಮ ನುಸುಳುವಿಕೆಯನ್ನು ಮೊದಲು ನಿಲ್ಲಿಸಲಿ ಎಂದಿರುವ ಗೃಹ ಸಚಿವರು, ಘನತೆ ಮತ್ತು ಗೌರವದ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ' ಎಂದಿದ್ದಾರೆ.
'ಪಾಕಿಸ್ತಾನ ಮತ್ತು ಚೀನಾದೊಂದಿಗೆ ನಾವು ಉತ್ತಮ ಸಂಬಂಧವನ್ನು ಬಯಸುತ್ತೇವೆ. ಭಾರತ ಒಂದು ಶಾಂತಿಯುತ ರಾಷ್ಟ್ರ. ನಾವು ನಮ್ಮ ಗಡಿಯನ್ನು ಮಾತ್ರ ರಕ್ಷಿಸುತ್ತಿದ್ದೇವೆ' ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
Advertisement