95 ಸಾವಿರ ಚಂದಾದಾರರು: ಕಳೆದ 10 ವರ್ಷಗಳಿಂದಲೂ ಸಂಸ್ಥೆಯ ಸ್ಥಾಪಕ ಅಠಾವಳೆ ಅವರು ಸಂದರ್ಶಕರನ್ನು ಭೇಟಿಯಾಗಿಲ್ಲ. ನಮ್ಮ ಸಂಸ್ಥೆಯಲ್ಲಿರುವವರಲ್ಲಿ ಹೆಚ್ಚಿನವರು ಮಹಿಳಾ ಪ್ರತಿನಿಧಿಗಳು ಮತ್ತು ಮಾಜಿ ಪತ್ರಕರ್ತರು. ಅವರೇ ದೈನಿಕ್ ಸಂಸ್ಥಾ ಪ್ರಭ ಎಂಬ ಮುಖವಾಣಿಯನ್ನು ಪ್ರಕಟಿ ಸುತ್ತಿದ್ದಾರೆ. ಇದರಲ್ಲಿ ಹಿಂದುತ್ವ ಮತ್ತು ಇತರೆ ಸಿದ್ಧಾಂತಗಳನ್ನು ಪ್ರತಿಪಾದಿಸಲಾಗುತ್ತದೆ. ರತ್ನಗಿರಿ, ಗೋವಾ-ಸಿಂಧುದುರ್ಗ, ಮುಂಬೈ, ಪುಣೆ ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಹಿಂದಿ, ಇಂಗ್ಲಿಷ್, ಮರಾಠಿ ಮತ್ತು ಕನ್ನಡ ಭಾಷೆಯಲ್ಲಿ ಇದು ಪ್ರಕಟವಾಗುತ್ತಿದ್ದು, 95 ಸಾವಿರ ಚಂದಾದಾರರಿದ್ದಾರೆ ಎಂದಿದ್ದಾರೆ ಮರಾಠೆ. ಪ್ರಧಾನ ಕಚೇರಿಯ 2ನೇ ಮಹಡಿ ಯಲ್ಲಿ ಸುವ್ಯವಸ್ಥಿತ ಆಡಿಯೋ-ವಿಡಿಯೋ ಪ್ರೋಡಕ್ಷನ್ ಸೆಂಟರ್ ಇದೆ. ಕಚೇರಿಯ ಆವರಣದಲ್ಲಿ ಅಲೋಪತಿ ಮತ್ತು ಆಯುರ್ವೇದಿಕ್ ಔಷಧಗಳ ಕ್ಲಿನಿಕ್‍ಗಳೂ ಇವೆ.