ವಕ್ಫ್ ಆದಾಯ ಅಲ್ಪಸಂಖ್ಯಾತರ ಎಲ್ಲ ತೊಂದರೆಗಳನ್ನು ಪರಿಹರಿಸಬಹುದು: ಹೆಫ್ತುಲ್ಲಾ

ದೇಶದಲ್ಲಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಲ್ಪಸಂಖ್ಯಾತರು ಎದುರಿಸುತ್ತಿರುವ ಎಲ್ಲ ತೊಂದರೆಗಳನ್ನು ವಕ್ಫ್ ಆಸ್ತಿಯಿಂದ ಬರುವ ಆದಾಯದಿಂದ ಪರಿಹರಿಸಬಹುದು
ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ನಜ್ಮಾ ಹೆಫ್ತುಲ್ಲಾ
ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ನಜ್ಮಾ ಹೆಫ್ತುಲ್ಲಾ

ಹೈದರಾಬಾದ್: ದೇಶದಲ್ಲಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಲ್ಪಸಂಖ್ಯಾತರು ಎದುರಿಸುತ್ತಿರುವ ಎಲ್ಲ ತೊಂದರೆಗಳನ್ನು ವಕ್ಫ್ ಆಸ್ತಿಯಿಂದ ಬರುವ ಆದಾಯದಿಂದ ಪರಿಹರಿಸಬಹುದು ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ನಜ್ಮಾ ಹೆಫ್ತುಲ್ಲಾ ಸೋಮವಾರ ಹೇಳಿದ್ದಾರೆ.

೨೦೦೬ ರಲ್ಲಿ ಸಂಚಾರ್ ಮಂಡಲಿ ಅಂದಾಜಿಸಿದ ಸುಮಾರು ೧೨,೦೦೦ ಕೋಟಿ ವಾರ್ಷಿಕ ಆದಾಯದಿಂದ ಸರ್ಕಾರಕ್ಕೆ ಯಾವುದೇ ಹೊರೆಯಾಗದಂತೆ ಎಲ್ಲ ಯೋಜನೆಗಳನ್ನು ಅನುಷ್ಠಾನ ಮಾಡಬಹುದು ಎಂದು ಅವರು ವರದಿಗಾರರಿಗೆ ಹೇಳಿದ್ದಾರೆ.

ದೇಶದಲ್ಲಿ ವಕ್ಫ್ ಆಸ್ತಿ ಸುಮಾರು ಆರು ಲಕ್ಷ ಎಕರೆ ಇದೆ ಎಂದು ಸಂಚಾರ್ ಮಂಡಲಿ ಹೇಳಿತ್ತು ಎಂದು ಅವರು ತಿಳಿಸಿದ್ದಾರೆ.

ವಕ್ಫ್ ಆಸ್ತಿಯ ಅತಿಕ್ರಮಣವನ್ನು ಸರಿಪಡಿಸುವ ಕಾಯ್ದೆ ಸಂಸತ್ತಿನಲ್ಲಿ ಇನ್ನೂ ಬರದೆ ಹೋಗಿರುವುದರ ಬಗ್ಗೆ ಪ್ರಶ್ನಿಸಿದಾಗ "ವೆಂಕಯ್ಯ ನಾಯ್ಡು(ಸಂಸದೀಯ ವ್ಯವಹಾರಗಳ ಸಚಿವ) ಅವರ ಜೊತೆ ಚರ್ಚಿಸಿ ಈ ಕಾಯ್ದೆ ಸಂಸತ್ತಿನಲ್ಲಿ ಚರ್ಚೆಯಾಗುವಂತೆ ನೋಡಿಕೊಳ್ಳುತ್ತೇನೆ. ಈ ಅಧಿವೇಶನದಲ್ಲಿ ಅಲ್ಲವಾದರೂ ಬಜೆಟ್ ಅಧಿವೇಶನದಲ್ಲಿ ಇದು ಜಾರಿಯಾಗುತ್ತದೆ" ಎಂದು ಹೆಪ್ತುಲ್ಲಾ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಮೇಲೂ ದಾಳಿ ಮಾಡಿದ ಅವರು ಆ ಪಕ್ಷದ ಅತಿಗಳಿಂದಲೇ ಮುಸ್ಲಿಮರು ಸಂತ್ರಸತರಾಗಿರುವುದು. ಬಿಜೆಪಿ-ಎನ್ ಡಿ ಎ ಆಡಳಿತ ವೇಳೆಯಲ್ಲಿ ಮುಸ್ಲಿಮರು ಸುರಕ್ಷಿತರಾಗಿದ್ದಾರೆ ಯಾವುದೇ ದಾಳಿಯಾಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಹೆಫ್ತುಲ್ಲಾ ಉತ್ತರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com