ಅಸಾವುದ್ದೀನ್ ಒವೈಸಿ
ಅಸಾವುದ್ದೀನ್ ಒವೈಸಿ

ಭಾರತವನ್ನು ಒಡೆಯುವುದಿಲ್ಲ, ಬಲಿಷ್ಠಗೊಳಿಸುತ್ತೇವೆ: ಅಸಾವುದ್ದೀನ್ ಒವೈಸಿ

ಭಾರತವನ್ನು ಒಡೆಯುವುದಿಲ್ಲ, ಬದಲಾಗಿ ಬಲಿಷ್ಠಗೊಳುಸುತ್ತೇವೆ ಎಂದು ಹೈದರಾಬಾದ್​ನ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮಿನ್ (ಎಂಐಎಂ) ಮುಖಂಡ ಅಸಾವುದ್ದೀನ್ ಒವೈಸಿ ಹೇಳಿದ್ದಾರೆ.

ಹೈದರಾಬಾದ್: ಭಾರತವನ್ನು ಒಡೆಯುವುದಿಲ್ಲ, ಬದಲಾಗಿ ಬಲಿಷ್ಠಗೊಳುಸುತ್ತೇವೆ ಎಂದು ಹೈದರಾಬಾದ್​ನ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮಿನ್ (ಎಂಐಎಂ) ಮುಖಂಡ ಅಸಾವುದ್ದೀನ್ ಒವೈಸಿ ಹೇಳಿದ್ದಾರೆ.
ಮೌಲಾನಾ ಆಜಾದ್ ಉರ್ದು ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದ ವೇಳೆ ಕೇಂದ್ರ ಸಚಿವೆ ನಜ್ಮಾ ಹೆಫ್ತುಲ್ಲಾ ಮಾಡಿದ್ದ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅಸಾವುದ್ದೀನ್ ಒವೈಸಿ, ಮುಸ್ಲಿಮರಿಗೆ ಭಾರತದಲ್ಲಿ ಗೌರವಾನ್ವಿತರಾಗಿದ್ದಾರೆ ಎಂಬುದನ್ನು ತೋರಿಸುತ್ತೇನೆ ಎಂದು ಹೇಳಿದ್ದಾರೆ.
ಎಂಎಎನ್ ಯುಯು ಬಿಜೆಪಿಗೆ ಪ್ರಚಾರದ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಅಸಾವುದ್ದೀನ್ ಒವೈಸಿ ಹೇಳಿದ್ದಾರೆ. ಶಿಕ್ಷಣದ ಬಗ್ಗೆ ಆಯೋಜಿಸಿದ್ದ ಸಮ್ಮೇಳನದಲ್ಲಿ ಕೇಂದ್ರ ಸಚಿವೆ ನಜ್ಮಾ ಹೆಫ್ತುಲ್ಲಾ ಮಾತನಾಡಿದ್ದರು.  ದೇಶದಲ್ಲಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಲ್ಪಸಂಖ್ಯಾತರು ಎದುರಿಸುತ್ತಿರುವ ಎಲ್ಲ ತೊಂದರೆಗಳನ್ನು ವಕ್ಫ್ ಆಸ್ತಿಯಿಂದ ಬರುವ ಆದಾಯದಿಂದ ಪರಿಹರಿಸಬಹುದು ಎಂದು ಹೇಳಿದ್ದರು.
ನಜ್ಮಾ ಹೆಫ್ತುಲ್ಲಾ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಒವೈಸಿ, ಮುಸ್ಲಿಮರು ಎದುರಿಸುತ್ತಿರುವ ಬಡತವನ್ನು ಕೊನೆಗಾಣಿಸಲು ಯತ್ನಿಸುತ್ತಿದ್ದು, ಭಾರತೀಯ ಮುಸ್ಲಿಮರು ಗೌರವಾನ್ವಿತವಾಗಿ ಬದುಕುವಂತಾಗಬೇಕು ಎಂದು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com