ಸಾಂದರ್ಭಿಕ ಚಿತ್ರ
ದೇಶ
ಭಾರತದ ಮೇಲೆ ದಾಳಿ ನಡೆಸಲು ಪಾಕ್ ಸಂಚು!
ಭಾರತದ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಲೇ ಇದ್ದು, ಇದೀಗ ಪಾಕ್ ಗುಪ್ತಚರ ಸಂಸ್ಥೆ...
ನವದೆಹಲಿ: ಭಾರತದ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಲೇ ಇದ್ದು, ಇದೀಗ ಪಾಕ್ ಗುಪ್ತಚರ ಸಂಸ್ಥೆ ಉಗ್ರ ಸಂಘಟನೆಯಾದ ಜೈಷೇ ಮೊಹಮ್ಮದ್‌ನ್ನು ಪುನಶ್ಚೇತನಗೊಳಿಸಿ ಭಾರತದ ಮೇಲೆ ದಾಳಿ ನಡೆಸಲು ಸಂಚು ಹೂಡಿದೆ.
2001ರಲ್ಲಿ ಭಾರತದ ಸಂಸತ್‌ನ ಮೇಲೆ ಜೈಷೇ ಮೊಹಮ್ಮದ್ ಉಗ್ರ ಸಂಘಟನೆ ದಾಳಿ ನಡೆಸಿತ್ತು.
ಸದ್ಯ, ವಿದೇಶದಲ್ಲಿರುವ ಭಾರತದ ಗುಪ್ತಚರ ಸಂಸ್ಥೆ (ರಾ) ದಿಂದ ಲಭಿಸಿದ ಮಾಹಿತಿಯ ಪ್ರಕಾರ ಐಎಸ್‌ಐ, ಜೈಷೇ ಮೊಹಮ್ಮದ್ ಸಂಘಟನೆ ಜತೆ ಸೇರಿ ಜಮ್ಮು ಕಾಶ್ಮೀರ ಸೇರಿದಂತೆ ಇತರ ಭಾಗಗಳಲ್ಲಿ ದಾಳಿ ನಡೆಸಲು ಮುಂದಾಗಿದೆ.
ನಿಷೇಧಕ್ಕೊಳಗಾದ ಸಂಘಟನೆಯಾಗಿದೆ ಜೈಷೇ ಮೊಹಮ್ಮದ್. 2002ರಲ್ಲಿ ಪಾಕಿಸ್ತಾನ ತಕೂಡಾ ಈ ಉಗ್ರ ಸಂಘಟನೆಗೆ ನಿಷೇಧ ಹೇರಿತ್ತು. ಆದರೂ ಈ ಸಂಘಟನೆ ತನ್ನ ಕಾರ್ಯಗಳನ್ನು ಮುಂದುವರಿಸುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ