1965ರ ಭಾರತ-ಪಾಕ್ ಯುದ್ಧ: ಹುತಾತ್ಮ ಯೋಧರಿಗೆ ಪ್ರಧಾನಿ ಶ್ರದ್ಧಾಂಜಲಿ

1965ರ ಭಾರತ - ಪಾಕಿಸ್ತಾನ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದರು.
ಅಮರ್ ಜವಾನ್ ಜ್ಯೋತಿಗೆ ಪುಷ್ಪ ನಮನ ಸಲ್ಲಿಸುತ್ತಿರುವ ಪ್ರಧಾನಿ
ಅಮರ್ ಜವಾನ್ ಜ್ಯೋತಿಗೆ ಪುಷ್ಪ ನಮನ ಸಲ್ಲಿಸುತ್ತಿರುವ ಪ್ರಧಾನಿ

ನವದೆಹಲಿ: 1965ರ ಭಾರತ - ಪಾಕಿಸ್ತಾನ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದರು.

ದೆಹಲಿಯ ಅಮರ್ ಜವಾನ್ ಜ್ಯೋತಿಯಲ್ಲಿ ಪ್ರಧಾನಿ ಮೋದಿ ಅವರು ಪುಷ್ಪ ನಮನ ಅರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

ಈ ವೇಳೆ ಭಾರತೀಯ ಭೂಸೇನಾ ಮುಖ್ಯಸ್ಥ ಜನರನ್‌ ದಲ್ಜೀರ್‌ ಸಿಂಗ್‌ ಸುಹಾಗ್‌, ವಾಯುಪಡೆ ಮುಖ್ಯಸ್ಥ ಎರ್‌ಚೀಫ್ ಮಾರ್ಷಲ್‌ ಅರುಪ್‌ ರಾಹಾ , ನೌಕಾಪಡೆ ಮುಖ್ಯಸ್ಥ ಎಡ್ಮಿರಲ್‌ ಆರ್‌.ಕೆ ಧೋವನ್‌ ಉಪಸ್ಥಿತರಿದ್ದರು.

1965 ರಲ್ಲಿ ಭಾರತ ಪಾಕ್ ನಡುವಿನ ಯುದ್ಧ ಸೆಪ್ಟಂಬರ್‌ 23 ರಂದು ಭಾರತದ ಗೆಲುವಿನೊಂದಿಗೆ ಮುಕ್ತಾಯಗೊಂಡಿತ್ತು. ಯುದ್ಧ ಗೆದ್ದ ಸಂಭ್ರಮಕ್ಕೆ ಇಂದಿಗೆ 50 ವರ್ಷ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com