ಉತ್ತರ ಪ್ರದೇಶದ ಮುಜಾಫರ್ ನಗರ ಕೋಮುಗಲಭೆ ತನಿಖಾ ವರದಿ ರಾಜ್ಯಪಾಲರಿಗೆ ಸಲ್ಲಿಕೆ

2013 ರಲ್ಲಿ ನಡೆದಿದ್ದ ಮುಜಫರ್ ನಗರ ಕೋಮುಗಲಭೆ ಪ್ರಕರಣದ ತನಿಖಾ ವರದಿಯನ್ನು ನಿವೃತ್ತ ನ್ಯಾ. ವಿಷ್ಣು ಸಹಾಯ್ ಉತ್ತರ ಪ್ರದೇಶ ರಾಜ್ಯಪಾಲ ರಾಮ್ ನಾಯಕ್ ಗೆ ಸಲ್ಲಿಸಿದ್ದಾರೆ.
ಕೋಮುಗಲಭೆ ವೇಳೆ ಪೋಲಿಸರಿಂದ ಲಾಠಿ ಪ್ರಹಾರ (ಸಾಂಕೇತಿಕ ಚಿತ್ರ)
ಕೋಮುಗಲಭೆ ವೇಳೆ ಪೋಲಿಸರಿಂದ ಲಾಠಿ ಪ್ರಹಾರ (ಸಾಂಕೇತಿಕ ಚಿತ್ರ)

ಲಖನೌ: 2013 ರಲ್ಲಿ ನಡೆದಿದ್ದ ಮುಜಫರ್ ನಗರ ಕೋಮುಗಲಭೆ ಪ್ರಕರಣದ ತನಿಖಾ ವರದಿಯನ್ನು ನಿವೃತ್ತ ನ್ಯಾ. ವಿಷ್ಣು ಸಹಾಯ್ ಉತ್ತರ ಪ್ರದೇಶ ರಾಜ್ಯಪಾಲ ರಾಮ್ ನಾಯಕ್ ಗೆ ಸಲ್ಲಿಸಿದ್ದಾರೆ.
ನ್ಯಾ.ವಿಷ್ಣು ಸಹಾಯ್ 775 - ಪುಟಗಳ ವರದಿಯನ್ನು ತಯಾರಿಸಿದ್ದು, ಆರು ಭಾಗಗಳನ್ನಾಗಿ ವಿಂಗಡಿಸಲಾಗಿದೆ. 2013 ರ ಸೆಪ್ಟೆಂಬರ್ 9 ರಂದು ನಡೆದಿದ್ದ ಕೋಮುಗಲಭೆಯ ಪ್ರಕರಣದ ತನಿಖಾ ವರದಿ ನೀಡಲು ಸಮಾಜವಾದಿ ಪಕ್ಷದ ನೇತೃತ್ವದ ಸರ್ಕಾರ, 1952 ರ ವಿಚಾರಣಾ ಆಯೋಗದ ಕಾಯ್ದೆ ಪ್ರಕಾರ ನಿವೃತ್ತ ನ್ಯಾ.ವಿಷ್ಣು ಸಹಾಯ್ ನೇತೃತ್ವದ ಏಕವ್ಯಕ್ತಿ ಆಯೋಗವನ್ನು ರಚನೆ ಮಾಡಿತ್ತು.
ಆಯೋಗಕ್ಕೆ ನೀಡಲಾಗಿದ್ದ ಆರು ತಿಂಗಳ ಗಡುವನ್ನು ವಿಸ್ತರಿಸಲಾಗಿತ್ತು. ಎರಡು ವರ್ಷಗಳ ಬಳಿಕ ತನಿಖಾ ಆಯೋಗ ರಾಜ್ಯಪಾಲರಿಗೆ ವರದಿಯನ್ನು ಸಲ್ಲಿಸಿದೆ. ಕೋಮುಗಲಭೆಯಲ್ಲಿ 63 ಜನ ಸಾವನ್ನಪ್ಪಿದ್ದರೆ, 55 000 ಜನರು ನಿರಾಶ್ರಿತರಾಗಿದ್ದರು. ತನಿಖಾ ವರದಿ ಸಲ್ಲಿಕೆ ವೇಳೆ ಆಯೋಗದ ಕಾರ್ಯದರ್ಶಿ ದಿಲೀಪ್ ಕುಮಾರ್, ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿ ಜೂತಿಕಾ ಪಾಟಂಕರ್, ಕಾನೂನು ಸಲಹೆಗಾರ ಎಸ್.ಎಸ್ ಉಪಾಧ್ಯಾಯ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com