ಟ್ವಿಟ್ಟರ್ ನಲ್ಲಿ ಮೋದಿಗೆ 15 ಮಿಲಿಯನ್ ಹಿಂಬಾಲಕರು: ಒಬಾಮ ಫಸ್ಟ್, ಮೋದಿ ಸೆಕೆಂಡ್

ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ 15 ದಶಲಕ್ಷ ಟ್ವಿಟ್ಟರ್ ಹಿಂಬಾಲಕರಿದ್ದಾರೆ. ಪ್ರಪಂಚದ ಪ್ರಮುಖ ನಾಯಕರ ಟ್ವಿಟ್ಟರ್ ಹಿಂಬಾಲಕರಲ್ಲಿ ಅಮೆರಿಕಾ ಅಧ್ಯಕ್ಷ ಬರಾಕ್ ...
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ 15 ದಶಲಕ್ಷ ಟ್ವಿಟ್ಟರ್ ಹಿಂಬಾಲಕರಿದ್ದಾರೆ. ಪ್ರಪಂಚದ ಪ್ರಮುಖ ನಾಯಕರ ಟ್ವಿಟ್ಟರ್ ಹಿಂಬಾಲಕರಲ್ಲಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಮೊದಲಿಗರಾಗಿದ್ದು, ಮೋದಿ 2ನೇ ಸ್ಥಾನದಲ್ಲಿದ್ದಾರೆ.

ಒಬಾಮಾ 64, 209, 386 ಸಾವಿರ ಹಿಂಬಾಲಕರಿದ್ದರೇ, ಮೋದಿಯನ್ನು 15,074, 389 ಟ್ವಿಟ್ಟರ್ ಹಿಂಬಾಲಕರಿದ್ದಾರೆ. ಇನ್ನು ಭಾರತದಲ್ಲಿ ಅತಿ ಹೆಚ್ಚು ಟ್ಟಿಟ್ಟರ್ ಹಿಂಬಾಲಕರನ್ನು ಶಾರೂಖ್ ಖಾನ್ ಹೊಂದಿದ್ದರೇ, 2 ನೇ ಸ್ಥಾನದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್, ಪ್ರಧಾನಿ ಮೋದಿ ಮೂರನೇ ಸ್ಥಾನ ಪಡೆದಿದ್ದಾರೆ.

ಕಳೆದ ಏಪ್ರಿಲ್ ನಲ್ಲಿ ವಿಶ್ವದ ಪ್ರಮುಖ ನಾಯಕರಲ್ಲಿ ಮೋದಿ 53ನೇ ಸ್ಥಾನ ಪಡೆದಿದ್ರು, ಒಬಾಮ ಮತ್ತು ಪೋಪ್ ಮೊದಲ ಹಾಗೂ 2ನೇ ಸ್ಥಾನದಲ್ಲಿದ್ದರು. ಕಳೆದ ಒಂದು ವರ್ಷದಲ್ಲಿ ಮೋದಿಗೆ 8.8 ಮಿಲಿಯನ್ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಹೆಚ್ಚಾಗಿದ್ದಾರೆ.

ಮೋದಿ ತಮ್ಮ ಪ್ರತಿಯೊಂದು ವಿಷಯಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳುತ್ತಾರೆ. ಪ್ರಪಂಚದ ಪ್ರಮುಖ ನಾಯಕರ ಜೊತೆ ಸಂಪರ್ಕಕ್ಕೂ ಮೋದಿ ಟ್ಟಿಟ್ಟರ್ ಅನ್ನೇ ಬಳಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com