
ಅಹಮದಾಬಾದ್: ಪಟೇಲ್ ಸಮುದಾಯದ ಮಿಸಲಾತಿಗಾಗಿ ಹೋರಾಟ ನಡೆಸುತ್ತಿರುವ ಹಾರ್ದಿಕ್ ಪಟೇಲ್ ಅವರನ್ನು ಗುರುವಾರದೊಳಗೆ ಕಡ್ಡಾಯವಾಗಿ ನ್ಯಾಯಲಯಕ್ಕೆ ಹಾಜರುಪಡಿಸಬೇಕೆಂದು ಬಿಜೆಪಿ ಸರ್ಕಾರಕ್ಕೆ ಗುಜರಾತ್ ಹೈಕೋರ್ಟ್ ಆದೇಶಿಸಿದೆ.
ಹಾರ್ದಿಕ್ ಪಟೇಲ್ ಅವರನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಹಾರ್ದಿಕ್ ಪಟೇಲ್ ಪರ ವಕೀಲರು ನಿನ್ನೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಮುಂಜಾನೆ 2.30ರಲ್ಲಿ ಈ ಆದೇಶ ನೀಡಿದೆ.
ಪಟೇಲ್ ಸಮುದಾಯದ ಮೀಸಲಾತಿ ಪರ ಹೋರಾಟ ನಡೆಸುತ್ತಿರುವ ಹಾರ್ದಿಕ್ ಪಟೇಲ್ ಮತ್ತವರ ಬೆಂಬಲಿಗರಿಗೆ ರಾಜ್ಯ ಸರ್ಕಾರದಿಂದ ಬೆದರಿಕೆ ಬರುತ್ತಿದೆ. ಸರ್ಕಾರದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆ ಕೈ ಬಿಡಲು ಒತ್ತಡ ಹೇರಲಾಗುತ್ತಿದೆ. ಹೀಗಾಗಿ ನಾಪತ್ತೆಯಾಗಿರುವ ಹಾರ್ದಿಕ್ ಪಟೇಲ್ ಅವರನ್ನು ಹುಡುಕಿ ಕೊಡಬೇಕು ಎಂದು ಪಟೇಲ್ ಪರ ವಕೀಲರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಮಧ್ಯ ರಾತ್ರಿ ನ್ಯಾಯಾದೀಶರ ಮನೆಯಲ್ಲಿ ಮಧ್ಯ ರಾತ್ರಿ ವಿಚಾರಣೆ ನಡೆಸಿದ ಜಡ್ಜ್ ಈ ಆದೇಶ ನೀಡಿದ್ದಾರೆ.
ಗುಜರಾತಿನ ಅರವಳ್ಳಿ ಗ್ರಾಮದಲ್ಲಿ ಯಾವುದೇ ಅನುಮತಿ ಪಡೆಯದೇ ಹಾರ್ದಿಕ್ ಪಟೇಲ್ ಸಭೆ ನಡೆಸುತ್ತಿದ್ದರು. ಈ ವೇಳೆ ಅವರನ್ನು ಬಂಧಿಸಲು ಹೊರಟಾಗ ವಾಹನದಲ್ಲಿ ಪರಾರಿಯಾಗಲು ಈ ವೇಳೆ ಹಾರ್ದಿಕ್ ಪಟೇಲರನ್ನು ಬಂಧಿಸಿದ್ದಾಗಿ ನ್ಯಾಯಾಲಯದ ಮುಂದೆ ಗುಜರಾತ್ ಪೊಲೀಸರು ಹೇಳಿಕೆ ನೀಡಿದ್ದಾರೆ. ಇನ್ನು ಗ್ರಾಮವೊಂದರಲ್ಲಿ ಅನುಮತಿ ಪಡೆಯದೇ ಸಭೆ ಏರ್ಪಡಿಸಿದ್ದ ಹಿನ್ನೆಲೆಯಲ್ಲಿ ಹಾರ್ದಿಕ್ ಪಟೇಲ್ ವಿರುದ್ಧ 13 ಮೊಕದ್ದಮೆಗಳನ್ನು ದಾಖಲಿಸಲಾಗಿದೆ.
Advertisement