ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನಿರುದ್ಯೋಗ ಸಮಸ್ಯೆ ಹೆಚ್ಚಲು ಉದ್ಯೋಗಸ್ಥ ಮಹಿಳೆ ಕಾರಣವಂತೆ!

ಛತ್ತೀಸ್ ಗಡ ಬಿಜೆಪಿ ಸರ್ಕಾರ ದೊಡ್ಡ ಪೇಚಿಗೆ ಸಿಲುಕಿದೆ. ಉದ್ಯೋಗಸ್ಥ ಮಹಿಳೆಯರು ನಿರುದ್ಯೋಗ ಹೆಚ್ಚಲು ಕಾರಣ ಎಂದು ಪಠ್ಯ ಪುಸ್ತಕದಲ್ಲಿ ಹೇಳಲಾಗಿದೆ.

ರಾಯ್ ಪುರ: ಛತ್ತೀಸ್ ಗಡ ಬಿಜೆಪಿ ಸರ್ಕಾರ ದೊಡ್ಡ ಪೇಚಿಗೆ ಸಿಲುಕಿದೆ.  ಛತ್ತೀಸ್ ಗಡದ 10 ನೇ ತರಗತಿ ಪುಸ್ತಕದ ಪಠ್ಯದಲ್ಲಿ ಯಡವಟ್ಟು ಮಾಡಿದೆ. ಉದ್ಯೋಗಸ್ಥ ಮಹಿಳೆಯರು ನಿರುದ್ಯೋಗ ಹೆಚ್ಚಲು ಕಾರಣ ಎಂದು ಪಠ್ಯ ಪುಸ್ತಕದಲ್ಲಿ ಹೇಳಲಾಗಿದೆ.

ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಎಲ್ಲಾ ವಲಯಗಳಲ್ಲಿ  ಮಹಿಳೆಯರು ಕೆಲಸ ಮಾಡುತ್ತಿರುವುದರಿಂದ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಎಂದು ಪ್ರೌಢ ಶಿಕ್ಷಣ ಮಂಡಳಿ 10 ನೇ ತರಗತಿಗೆ ತಯಾರಿಸುವ ಪುಸ್ತಕದಲ್ಲಿ ಅಳವಡಿಸಿದೆ ಎಂದು ವರದಿಯೊಂದು ತಿಳಿಸಿದೆ.

ಶಾಲಾ ಶಿಕ್ಷಕಿಯೊಬ್ಬರು ಇದನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಪಠ್ಯ ಪುಸ್ತಕಗಳಲ್ಲಿ ಯಡವಟ್ಟಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 2014 ರಲ್ಲಿ ಪಶ್ಚಿಮ ಬಂಗಾಳದ ಪಠ್ಯ ಪುಸ್ತಕಗಳಲ್ಲಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರನ್ನು ಭಯೋತ್ಪಾದಕರು ಎಂದು ಮುದ್ರಿಸಲಾಗಿತ್ತು.

Related Stories

No stories found.

Advertisement

X
Kannada Prabha
www.kannadaprabha.com