ಪೋರ್ನ್ ವೆಬ್ ಸೈಟ್ ಗಳ ನಿಷೇಧಕ್ಕೆ ಆಗ್ರಹಿಸಿ ಮಹಿಳಾ ಮಹಿಳಾ ವಕೀಲರ ಸಂಘಟನೆಯಿಂದ ಸುಪ್ರೀಂ ಗೆ ಅರ್ಜಿ

ಎಲ್ಲಾ ರೀತಿಯ ಅಶ್ಲೀಲ(ಪೋರ್ನ್) ವೆಬ್ ಸೈಟ್ ಗಳಿಗೆ ನಿಷೇಧಿಸಲು ಆದೇಶ ನೀಡಬೇಕೆಂದು ಸುಪ್ರೀಂ ಕೋರ್ಟ್ ನ ಮಹಿಳಾ ಲಾಯರ್ ಗಳ ಸಂಘಟನೆ, ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಎಲ್ಲಾ ರೀತಿಯ ಅಶ್ಲೀಲ(ಪೋರ್ನ್) ವೆಬ್ ಸೈಟ್ ಗಳಿಗೆ ನಿಷೇಧಿಸಲು ಆದೇಶ ನೀಡಬೇಕೆಂದು ಸುಪ್ರೀಂ ಕೋರ್ಟ್ ನ ಮಹಿಳಾ ವಕೀಲರ ಸಂಘಟನೆ, ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದೆ.

ವೆಬ್ ಸೈಟ್ ಗಳನ್ನು ನಿಷೆಧಿಸುವುದರೊಂದಿಗೆ ಪೋರ್ನ್ ವಿಡಿಯೋಗಳು ಹಂಚಿಕೆ ಮಾಡುವ ವಿಧಾನಗಳನ್ನೂ ತಡೆಗಟ್ಟಬೇಕಿದೆ ಎಂದು ಸುಪ್ರೀಂ ಕೋರ್ಟ್ ಗೆ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಇತ್ತೀಚೆಗಷ್ಟೇ 857 ಪೋರ್ನ್ ವೆಬ್ ಸೈಟ್ ಗಳಿಗೆ ನಿಷೇಧ ವಿಧಿಸಿದ್ದ ಕೇಂದ್ರ ಸರ್ಕಾರ ಮಕ್ಕಳ ಅಶ್ಲೀಲ ವೆಬ್ ಸೈಟ್ ಗಳನ್ನು ಹೊರತುಪಡಿಸಿ ವಯಸ್ಕರ ವೆಬ್ ಸೈಟ್ ಗಳಿಗೆ ನಿಷೇಧ ವಿಧಿಸಿರಲಿಲ್ಲ.  

ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿರುವ ಮಹಿಳಾ ನ್ಯಾಯಾದಿಗಳ ಸಂಘಟನೆ ಎಲ್ಲಾ ರೀತಿಯ ಅಶ್ಲೀಲ ವೆಬ್ ಸೈಟ್ ಗಳಿಗೆ ನಿಷೇಧ ವಿಧಿಸಬೇಕು ಎಂದು ಮಹಿಳಾ ನ್ಯಾಯವಾದಿಗಳ  ಸಂಘಟನೆಯ ಕಾರ್ಯದರ್ಶಿ ಪ್ರೇರಣ ಕುಮಾರಿ ಒತ್ತಾಯಿಸಿದ್ದಾರೆ. ಅ.13 ಕ್ಕೆ ಅರ್ಜಿ ವಿಚಾರಣೆ ನಡೆಯಲಿದೆ. ಪೋರ್ನೋಗ್ರಫಿ ವೀಕ್ಷಣೆಯಿಂದ ಯುವಜನತೆ ಮಹಿಳೆಯರು, ಹುಡುಗಿಯರ ವಿರುದ್ಧ ಹೆಚ್ಚು ಅಪರಾಧವೆಸಗುತ್ತಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ಪೋರ್ನ್ ವಿಷಯದ ಬಗ್ಗೆ ರಾಷ್ಟ್ರೀಯ ನೀತಿಯನ್ನು ರೂಪಿಸಬೇಕೆಂದು ಅರ್ಜಿಯಲ್ಲಿ ಆಗ್ರಹಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com