ರಸಗುಲ್ಲಾ ಕ್ಕಾಗಿ ಎರಡು ರಾಜ್ಯಗಳ ಕಿತ್ತಾಟ: ತನಿಖೆಗೆ ಮೂರು ಆಯೋಗ ರಚಿಸಿದ ಒಡಿಸಾ

ರಸಗುಲ್ಲಾ ಕಂಡಾಕ್ಷಣ ಬಾಯಲ್ಲಿ ನೀರೂರದೆ ಇರಲಾರದು. ಆದ್ರೆ ಈ ರಸಗುಲ್ಲಾ ಇದೀಗ ಪಶ್ಚಿಮ ಬಂಗಾಳ ಹಾಗೂ ಓಡಿಶಾ ರಾಜ್ಯದ ನಡುವೆ ಕಹಿಯನ್ನು ....
ರಸಗುಲ್ಲಾ
ರಸಗುಲ್ಲಾ

ಭುವನೇಶ್ವರ್: ರಸಗುಲ್ಲಾ ಕಂಡಾಕ್ಷಣ ಬಾಯಲ್ಲಿ ನೀರೂರದೆ ಇರಲಾರದು. ಆದ್ರೆ ಈ ರಸಗುಲ್ಲಾ ಇದೀಗ ಪಶ್ಚಿಮ ಬಂಗಾಳ ಹಾಗೂ ಓಡಿಶಾ ರಾಜ್ಯದ ನಡುವೆ ಕಹಿಯನ್ನು ಉಂಟುಮಾಡಿದೆ. ಓಡಿಶಾ ರಸಗುಲ್ಲಾವನ್ನು ತನ್ನದೆನ್ನುತ್ತಿದ್ದರೆ,  ಇತ್ತ ಪಶ್ಚಿಮ ಬಂಗಾಳ ಕೂಡ ಇದು ತನ್ನದೇ ಎನ್ನುತ್ತಿದೆ. 2010ರಲ್ಲಿ ಮ್ಯಾಗಜೀನ್‌ ಒಂದಕ್ಕೆ ನಡೆಸಲಾದ ಸರ್ವೆಯಲ್ಲಿ ರಸಗುಲ್ಲಾವನ್ನು ರಾಷ್ಟ್ರೀಯ ಮಿಠಾಯಿಯ ರೂಪದಲ್ಲಿ ಬಿಂಬಿಸಲಾಗಿದೆ. ರಸಗುಲ್ಲಾ ಒಡಿಶಾ ರಾಜ್ಯದ ಸಿಹಿ ತಿನಿಸು ಇದು ಒಡಿಶಾಕ್ಕೆ ಸೇರಿದ್ದು ಎಂದು ಒಡಿಶಾ ಸರ್ಕಾರ ರಸಗುಲ್ಲಾದ ಭೌಗೋಳಿಕ ಪರಿಚಯಕ್ಕೆ ಮುಂದಾದರೆ ಪಶ್ಚಿಮ ಬಂಗಾಳ ಇದನ್ನು ವಿರೋಧಿಸಿದೆ.

700 ವರ್ಷ ಹಿಂದೆ ರಸಗುಲ್ಲಾವನ್ನು ಒಡಿಶಾದಲ್ಲಿ ತಯಾರಿಸಲಾಯಿತು ಎಂದು ನವೀನ್‌ ಚಂದ್ರರ ಮೊಮ್ಮಗ ಅನಿಮಿಕ್‌ ರಾಯ್‌ ಹೇಳಿದ್ದಾರೆ. ಬಂಗಾಳದಲ್ಲಿ 18 ನೇ ಶತಮಾನದಲ್ಲಿ ಡಚ್‌ ಹಾಗೂ ಪೋರ್ಚುಗೀಸರು ಮಿಠಾಯಿ ಮಾಡುವ ವಿಧಾನವನ್ನು ಹೇಳಿಕೊಟ್ಟರು ಅಲ್ಲಿಂದ ಪಶ್ಚಿಮ ಬಂಗಾಳದಲ್ಲಿ ರಸಗುಲ್ಲಾ ಅಸ್ಥಿತ್ವಕ್ಕೆ ಬಂದಿದೆ. ನವೀನ್‌ ಚಂದ್ರರು 1868ರಲ್ಲಿ ರಸಗುಲ್ಲಾವನ್ನು ಕಂಡುಹಿಡಿದಿದ್ದಾರೆ ಎನ್ನುವುದು ಎಲ್ಲಾ ರಸಗುಲ್ಲಾ ಪ್ರಿಯರಿಗೂ ಗೊತ್ತಿರುವ ವಿಷ್ಯ. ಆದ್ದರಿಂದ ನವೀನ್‌ಚಂದ್ರರನ್ನು ಕೊಲಂಬಸ್‌ ಆಫ್‌ ರಸಗುಲ್ಲಾ ಎಂದೂ ಕರೆಯುತ್ತಾರೆ.

ಆದ್ರೆ ರಸಗುಲ್ಲಾ ಓಡಿಶಾದ ಕೊಡುಗೆ ಎಂಬುದನ್ನು ಹಲವು ಐತಿಹಾಸಿಕ ಉಲ್ಲೇಖಗಳೂ ಇವೆ. ಪುರಿ ಜಗನ್ನಾಥ ರಥಯಾತ್ರೆ ಯಾವಾಗ ಪ್ರಾರಂಭವಾಯಿತೋ ಆವಾಗಲೇ ರಸಗುಲ್ಲಾ ಕೂಡಾ ಅಸ್ಥಿತ್ವಕ್ಕೆ ಬಂದಿದೆ. 300 ವರ್ಷಗಳ ಹಿಂದೆ ಪುರಿ ಜಗನ್ನಾಥದಲ್ಲಿ ರಥಯಾತ್ರೆ ಸಂದರ್ಭ ರಸಗುಲ್ಲಾವನ್ನು ಪ್ರಸಾದವಾಗಿ ನೀಡುತ್ತಿದ್ದರು. ಆದರೆ ಪಶ್ಚಿಮ ಬಂಗಾಳವೇ ನಮ್ಮ  ರಸಗುಲ್ಲಾ 150 ವರ್ಷ ಹಿಂದಿನದ್ದು ಎಂದು ಒಪ್ಪಿಕೊಳ್ಳುತ್ತಿರುವಾಗ ರಸಗುಲ್ಲಾ ಪ.ಬಂಗಾಳದ ಮಿಠಾಯಿಯಾಗಲು ಹೇಗೆ ಸಾಧ್ಯ ಎನ್ನುತ್ತಾರೆ ಸಾಂಸ್ಕೃತಿಕ ಇತಿಹಾಸಕಾರ ಆಸೀತ್‌ ಮೊಹಂತಿ.

ಇನ್ನು ರಸಗುಲ್ಲಾ ಹುಟ್ಟಿನ ಬಗ್ಗೆ ತನಿಖೆ ನಡೆಸಲು ಒಡಿಸಾ ಸರ್ಕಾರ ಮೂರು ಸಮಿತಿ ರಚಿಸಿದೆ. ಈ ಮೂರು ತಂಡಗಳು ರಸಗುಲ್ಲಾ ಹುಟ್ಟು, ಮೂಲ ಹಾಗೂ ದಾಖಲೆಗಳನ್ನು ಸಂಗ್ರಹಿಸಿ 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com