ಜೂಹಿ ಚಾವ್ಲಾ, ಅನಿಲ್ ಕಪೂರ್, ಜಿತೇಂದ್ರರಿಗೆ ಮುಂಬೈ ಪಾಲಿಕೆ ನೊಟೀಸು

ದೇಶಾದ್ಯಂತ ಅಲ್ಲಲ್ಲಿ ಡೆಂಘಿ ಜ್ವರ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಮುಂಜಾಗ್ರತೆ ವಹಿಸಲು ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂದು ಆರೋಗ್ಯ ಇಲಾಖೆ...
ಅನಿಲ್ ಕಪೂರ್, ಜೂಹಿ ಚಾವ್ಲಾ, ಜಿತೇಂದ್ರ (ಸಂಗ್ರಹ ಚಿತ್ರ)
ಅನಿಲ್ ಕಪೂರ್, ಜೂಹಿ ಚಾವ್ಲಾ, ಜಿತೇಂದ್ರ (ಸಂಗ್ರಹ ಚಿತ್ರ)

ಮುಂಬೈ: ದೇಶಾದ್ಯಂತ ಅಲ್ಲಲ್ಲಿ ಡೆಂಘಿ ಜ್ವರ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಮುಂಜಾಗ್ರತೆ ವಹಿಸಲು ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂದು ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆಗಳು ಜಾಹಿರಾತು ನೀಡುತ್ತಲೇ ಬಂದಿವೆ.

ಆದರೆ ಇದನ್ನು ಕಿವಿಗೆ ಹಾಕಿಕೊಳ್ಳದೆ, ತಮ್ಮ ಪಾಡಿಗೆ ತಾವಿದ್ದು ತಮ್ಮ ಮನೆಯ ಸುತ್ತಮುತ್ತ ಸೊಳ್ಳೆ ಉತ್ಪತ್ತಿಗೆ ಕಾರಣರಾದ ಬಾಲಿವುಡ್ ನ ಜೂಹಿ ಚಾವ್ಲಾ, ಜಿತೇಂದ್ರ ಮತ್ತು ಅನಿಲ್ ಕಪೂರ್ ಅವರಿಗೆ ಮುಂಬೈ ಮಹಾನಗರ ಪಾಲಿಕೆ 1888ರ ಕಾಯ್ದೆ, ಸೆಕ್ಷನ್ 381 ಬಿ ಅಡಿ ನೊಟೀಸ್ ಜಾರಿ ಮಾಡಿದೆ.

ಪಾಲಿಕೆ ಅಧಿಕಾರಿಗಳು ನಗರದಲ್ಲಿನ ಮನೆಗಳಲ್ಲಿ ತಪಾಸಣೆ ಮಾಡಲು ಬಂದಾಗ ಈ ನಟರ ಬಂಗಲೆಗಳಲ್ಲಿ ಡೆಂಘಿ ಉತ್ಪತಿ ಸೊಳ್ಳೆಗಳ ತಾಣಗಳು ಕಂಡುಬಂದಿವೆ.ಅನಿಲ್ ಕಪೂರ್ ಮನೆಯ ಟರ್ಪಲಿನ್ ಮೇಲೆ, ಜೂಹಿ ಚಾವ್ಲಾ ಅವರ ಗಾರ್ಡನ್ ನಲ್ಲಿ, ಜಿತೇಂದ್ರ ಅವರ ಮನೆಯ ಕಾರಂಜಿಯಲ್ಲಿ  ಸೊಳ್ಳೆ ಉತ್ಪತ್ತಿ ತಾಣಗಳು ಕಂಡು ಬಂದಿವೆ.

ಪಾಲಿಕೆ ಅಧಿಕಾರಿಗಳು ಅಮಿತಾಬ್ ಬಚ್ಚನ್ ಮತ್ತು ಶಬಾನಾ ಆಜ್ಮಿ ಅವರ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದು, ಅವರು ಪಾಲಿಕೆಯ ನಿಯಮಗಳನ್ನು ಸರಿಯಾಗಿ ಪಾಲಿಸಿದ್ದಾರೆ ಎಂಬುದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com