
ನವದೆಹಲಿ: ಮದ್ಯಪಾನ ಮಾಡಲು ವಿಧಿಸಿರುವ ವಯಸ್ಸಿನ ಮಿತಿಯನ್ನು ಇಳಿಕೆ ಮಾಡುವ ಪ್ರಸ್ತಾವನೆಯನ್ನು ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ಪರಿಗಣಿಸಿದೆ.
ಭಾರತದ ರಾಷ್ಟ್ರೀಯ ಭೋಜನಾ ಕೇಂದ್ರಗಳ ಸಂಘದ 33 ನೇ ವಾರ್ಷಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರವಾಸೋದ್ಯಮ ಸಚಿವ ಕಪಿಲ್ ಮಿಶ್ರಾ, ಮದ್ಯಪಾನಕ್ಕೆ ವಿಧಿಸಲಾಗಿರುವ ಕನಿಷ್ಠ 25 ವರ್ಷ ವಯೋಮಿತಿ ಹೆಚ್ಚಾಯಿತು, ಅದನ್ನು ಇಳಿಕೆ ಮಾಡಬೇಕು ಎಂದು ದೆಹಲಿ ಹೇಳಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಮದ್ಯಪಾನಕ್ಕೆ ವಿಧಿಸಬೇಕಿರುವ ಸರಿಯಾದ ವಯಸ್ಸಿನ ಬಗ್ಗೆ ಪ್ರಸ್ತಾವನೆ, ಸಲಹೆ ನೀಡಲು ರೆಸ್ಟೋರೆಂಟ್ ಹಾಗೂ ಆಡಳಿತ ಸಂಸ್ಥೆಗಳಿಗೆ ಪ್ರವಾಸೋದ್ಯಮ ಸಚಿವ ಕಪಿಲ್ ಮಿಶ್ರಾ ಆಹ್ವಾನ ನೀಡಿದ್ದಾರೆ. ಹಳೆಯ ಕಾನೂನುಗಳನ್ನು ಬದಲಾವಣೆ ಮಾಡಬೇಕಿದೆ. ದೆಹಲಿಯನ್ನು ಉತ್ತಮಗೊಳಿಸಲು ಹಳೆಯ ಕಾನೂನುಗಳನ್ನು ಬದಲಾವಣೆ ಮಾಡುತ್ತೇವೆ ಎಂದು ಮಿಶ್ರಾ ಹೇಳಿದ್ದಾರೆ.
Advertisement