
ನವದೆಹಲಿ:ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಧ್ಯಾತ್ಮಿಕ ಗುರು ಸ್ವಾಮಿ ದಯಾನಂದ ಗಿರಿ ರಿಷಿಕೇಶದಲ್ಲಿ ಬುಧನಾರ ಸಂಜೆ ವಿಧಿವಶರಾಗಿದ್ದಾರೆ.
87 ವರ್ಷ ವಯಸ್ಸಿನ ದಯಾನಂದ ಗಿರಿ ಬುಧುವಾರ ರಾತ್ರಿ 10.20 ರ ವೇಳೆಯಲ್ಲಿ ಶ್ರೀಶಾಮ್ಜಾದಿ ಆಶ್ರಮದಲ್ಲಿ ಇಹಲೋಕ ತ್ಯಜಿಸಿದ್ದಾರೆ. ದಯಾನಂದ ಗಿರಿ ಹಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು.
ಕೆಲ ದಿನಗಳ ಹಿಂದಷ್ಟೇ ಗಿರಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಆಸ್ಪತ್ರೆಯಿಂದ ಕರೆ ತರಲಾಗಿತ್ತು. ಇನ್ನು ದಯಾನಂದ ಗಿರಿ ಅವರ ಅಂತಿಮ ಸಂಸ್ಕಾರ ಸೆಪ್ಟಂಬರ್ 25 ರಂದು ನಡೆಯಲಿದೆ.
ಸೆಪ್ಟಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ ಆಶ್ರಮಕ್ಕೆ ಭೇಟಿ ನೀಡಿ ಗುರುಗಳ ಆರೋಗ್ಯ ಕ್ಷೇಮ ವಿಚಾರಿಸಿದ್ದರು. ಅಮೆರಿಕಾ ಪ್ರವಾಸದಲ್ಲಿರುವ ಮೋದಿ ಟ್ವಿಟ್ಟರ್ ನಲ್ಲಿ ದಯಾನಂದ ಗುರುಗಳ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
Advertisement