ಸಂಜಯ್ ದತ್ ಕ್ಷಮಾಧಾನ ಅರ್ಜಿ ತಿರಸ್ಕರಿಸಿದ ಮಹಾರಾಷ್ಟ್ರ ರಾಜ್ಯಪಾಲ

1993ರ ಮುಂಬಯಿ ಸ್ಫೋಟದಲ್ಲಿ ಸಂಬಂಧ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಂಜಯ್ ದತ್ ಸಲ್ಲಿಸಿದ್ದ ಕ್ಷಮಾಧಾನ ...
ಸಂಜಯ್ ದತ್
ಸಂಜಯ್ ದತ್

ಮುಂಬಯಿ: 1993ರ ಮುಂಬಯಿ ಸ್ಫೋಟದಲ್ಲಿ ಸಂಬಂಧ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಂಜಯ್ ದತ್ ಸಲ್ಲಿಸಿದ್ದ ಕ್ಷಮಾಧಾನ ಅರ್ಜಿಯನ್ನು ಮಹಾರಾಷ್ಟ್ರ ರಾಜ್ಯಪಾಲ ತಿರಸ್ಕರಿಸಿದ್ದಾರೆ.

ಮಹಾರಾಷ್ಟ್ರ ರಾಜ್ಯಪಾಲ ವಿದ್ಯಾಸಾಗರ್ ರಾವ್,  ನಟ ಸಂಜಯ್ ದತ್ ಅವರ ಅರ್ಜಿ ಕ್ಷಮಾಧಾನಕ್ಕೆ ಯೋಗ್ಯವಾಗಿಲ್ಲ ಎಂದು ಹೇಳಿ ತಿರಸ್ಕರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮಹಾರಾಷ್ಟ್ರ ಗೃಹ ಇಲಾಖೆ ಕ್ಷಮಾಧಾನ ಅರ್ಜಿಗೆ ಶಿಫಾರಸ್ಸು ಮಾಡಿತ್ತು. 2103 ರಲ್ಲಿ ಸುಪ್ರಿ ಕೋರ್ಟ್ ಗೂ ಕೂಡ ಸಂಜಯ್ ದತ್ ಕ್ಷಮಾಧಾನ ನೀಡುವಂತೆ ಮನವಿ ಸಲ್ಲಿಸಿದ್ದರು. ಅಂದಿನ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಕೂಡ ಅರ್ಜಿಯನ್ನು ತಿರಸ್ಕರಿಸಿದ್ದರು.

1993ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಹಿನ್ನೆಲೆಯಲ್ಲಿ ಸಂಜಯ್ ದತ್ ಗೆ ಆರು ವರ್ಷ ಶಿಕ್ಷೆಯಾಗಿದೆ. 2007 ರಿಂದಸೆರವಾಸ ಅನುಭವಿಸುತ್ತಿರುವ ಸಂಜಯ್ ದತ್ ಜಾಮೀನಿಗಾಗಿ ನಡೆಸಿದ ಹೋರಾಟ ವಿಫಲವಾಗಿ 2013 ಮಾರ್ಚ್ ನಿಂದ ಪುಣೆಯ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಸದ್ಯ ಮಗಳ ಮೂಗಿನ ಶಸ್ತ್ರ ಚಿಕಿತ್ಸೆ ಹಿನ್ನೆಲೆಯಲ್ಲಿ ಪೆರೋಲ್ ಮೇಲೆ ಸಂಜಯ್ ದತ್ ಹೊರ ಬಂದಿದ್ದಾರೆ. 2016 ರ ಫೆಬ್ರವರಿಯಲ್ಲಿ ದತ್ ಶಿಕ್ಷೆ ಅವಧಿ ಮುಗಿದು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com