ಗೋವಿನ ಸಗಣಿ ಅಣುಬಾಂಬ್ ಗಳನ್ನು ನಿಷ್ಪರಿಣಾಮಕಾರಿಯಾಗಿಸುತ್ತದೆ: ಮುಸ್ಲಿಂ ರಾಷ್ಟ್ರೀಯ ಮಂಚ್

ಗೋವಿನ ಸಗಣಿ ಹಲವು ವಿಧಗಳಲ್ಲಿ ಉಪಯೋಗವಾಗುತ್ತದೆ ಎಂಬುದು ಗೊತ್ತಿರುವ ವಿಷಯವೇ. ಸಗಣಿ ಬಾಂಬ್ ಗಳನ್ನು ಪರಿಣಾಮಗಳನ್ನೇ ಕುಗ್ಗಿಸುತ್ತದೆ ಎಂಬ ಹೊಸ ವಿಷಯ ಕೇಳಿದ್ದಿರಾ?
ಗೋವಿನ ಸಗಣಿ ಅಣುಬಾಂಬ್ ಗಳನ್ನು ನಿಷ್ಪರಿಣಾಮಕಾರಿಯಾಗಿಸುತ್ತದೆ: ಮುಸ್ಲಿಂ ರಾಷ್ಟ್ರೀಯ ಮಂಚ್
Updated on

ನವದೆಹಲಿ: ಗೋವಿನ ಸಗಣಿ ಹಲವು ವಿಧಗಳಲ್ಲಿ ಉಪಯೋಗವಾಗುತ್ತದೆ ಎಂಬುದು ಗೊತ್ತಿರುವ ವಿಷಯವೇ. ಸಗಣಿ ಬಾಂಬ್ ಗಳನ್ನು ಪರಿಣಾಮಗಳನ್ನೇ ಕುಗ್ಗಿಸುತ್ತದೆ ಎಂಬ ಹೊಸ ವಿಷಯ ಕೇಳಿದ್ದಿರಾ?

ಆರ್.ಎಸ್.ಎಸ್ ನ ಮುಸ್ಲಿಂ ರಾಷ್ಟ್ರೀಯ ಮಂಚ್ ಇಂಥದ್ದೊಂದು ಹೊಸ ಥಿಯರಿಯನ್ನು ಮಂಡಿಸಿದೆ. ಹಸು ಮತ್ತು ಇಸ್ಲಾಂ ಎಂಬ ಕಿರು ಪುಸ್ತಕದಲ್ಲಿ ಸಗಣಿಯಿಂದ ಅಣುಬಾಂಬ್ ಹಾಗೂ ಹೈಡ್ರೋಜನ್ ಬಾಂಬ್ ನ ಪರಿಣಾಮಗಳನ್ನು ಕುಗ್ಗಿಸುತ್ತದೆ ಎಂದು ಪ್ರಕಟಿಸಲಾಗಿದೆ.

ಸಗಣಿ, ಬಾಂಬ್ ಗಳಿಂದ ಉಂಟಾಗುವ ರೇಡಿಯೋವಿಕಿರಣಗಳನ್ನು ನಿಷ್ಪರಿಣಾಮಕಾರಿಯಾಗಿಸುತ್ತದೆ. ಇದಕ್ಕೆ ವೈಜ್ಞಾನಿಕ ಆಧಾರವಿದೆ ಎಂದು ಮುಸ್ಲಿಂ ರಾಷ್ಟ್ರೀಯ ಮಂಚ್ ಹೇಳಿದೆ. ಇದೇ ವೇಳೆ ಗೋಹತ್ಯೆಯನ್ನು ನಿಲ್ಲಿಸುವಂತೆ ಮುಸ್ಲಿಮರಿಗೆ ಕರೆ ನೀಡಿದೆ. ಕಿರು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಆರ್.ಎಸ್.ಎಸ್ ನ ಕಾರ್ಯಕರ್ತ ಇಂದ್ರೇಶ್ ಕುಮಾರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com