ಸಿಂಗಾಪುರ: ರಿಲಯೆನ್ಸ್ ಇಂಡಸ್ಟ್ರೀಸ್‍ನ ಮುಖೇಶ್ ಅಂಬಾನಿ ಸತತ ಒಂಬತ್ತನೇ ವರ್ಷ ದೇಶದ ನಂಬರ್ ಒನ್ ಶ್ರೀಮಂತ ಪಟ್ಟವನ್ನು ಉಳಿಸಿಕೊಂಡಿದ್ದಾರೆ. ಅವರ ಒಟ್ಟಾರೆ ಆಸ್ತಿ ಮೌಲ್ಯ 1890 ಕೋಟಿ ಡಾಲರ್ (ಸುಮಾರು ರು.1.18 ಲಕ್ಷ ಕೋಟಿ) ಗಳಾಗಿದೆ ಎಂದು ಫೋರ್ಬ್ಸ್ ಬಿಡುಗಡೆ ಮಾಡಿರುವ ಭಾರತ ದ ಶ್ರೀಮಂತರ ಪಟ್ಟಿಯಲ್ಲಿ ಹೇಳಿದೆ. ಸನ್ ಫಾರ್ಮಾ ಕಂಪನಿಯ ದಿಲೀಪ್ ಸಾಂಘ್ವಿ1,800 ಕೋಟಿ ಡಾಲರ್‍ಗಳೊಂದಿಗೆ 2ನೇ ಸ್ಥಾನದಲ್ಲಿ ದ್ದರೆ, 1,590 ಕೋಟಿ ಡಾಲರ್‍ಗಳೊಂದಿಗೆ ವಿಪ್ರೋ ಕಂಪನಿಯ ಅಜೀಂ ಪ್ರೇಮ್ ಜಿ 3ನೇ ಸ್ಥಾನದಲ್ಲಿದ್ದಾರೆ. ನೂರು ಮಂದಿಯ ಈ ಪಟ್ಟಿಯ ಮೊದಲ ಹತ್ತು ಶ್ರೀಮಂತರಲ್ಲಿ ಹಿಂದೂಜಾ ಸಹೋದರರು 4, ಪಲ್ಲೋನ್‍ಜಿ ಮಿಸ್ತ್ರಿ 5, ಶಿವನಾಡರ್ 6, ಗೋದ್ರೆ-ಜ್ ಕುಟುಂಬ 7, ಲಕ್ಷ್ಮಿ ಮಿತ್ತಲ್ 8, ಸೈರಸ್ ಪೂನಾವಾಲ 9, ಕುಮಾರ ಮಂಗಳಂ ಬಿರ್ಲಾ 10ನೇ ಸ್ಥಾನದಲ್ಲಿದ್ದಾರೆ. ಆನ್‍ಲೈನ್ ಮಾರುಕಟ್ಟೆ ಕಂಪನಿ ಫ್ಲಿಪ್ ಕಾರ್ಟ್ ಸಂಸ್ಥಾಪಕರು, ಇಂಡಿಗೋ ಸಹ ಸಂಸ್ಥಾಪಕ ರಾಕೇಶ್ ಗಂಗ್ವಾಲ್ ಸೇರಿದಂತೆ 12 ಮಂದಿ ಹೊಸಬರು ಈ ಪಟ್ಟಿಗೆ ಸೇರಿದ್ದಾರೆ. ಗಂಗ್ವಾಲ್ 70ನೇಸ್ಥಾನದಲ್ಲಿದ್ದರೆ, ಅವರ ಪಾಲುದಾರ ರಾಹುಲ್ ಭಾಟಿಯಾ 38ನೇ ಸ್ಥಾನದಲ್ಲಿದ್ದಾರೆ.