ಮಹಾ ರಾಜ್ಯಪಾಲರಿಗೆ ಕ್ಷಮಾಧಾನ ಅರ್ಜಿ ಸಲ್ಲಿಸಿಯೇ ಇಲ್ಲ: ಸಂಜಯ್ ದತ್

ಕ್ಷಮಾಧಾನ ಕೋರಿ ಮಹಾರಾಷ್ಟ್ರ ರಾಜ್ಯಪಾಲರಿಗೆ ಯಾವುದೇ ಅರ್ಜಿ ಸಲ್ಲಿಸಿಲ್ಲ ಮತ್ತು ತಮ್ಮ ಪರವಾಗಿ ಅರ್ಜಿ ಸಲ್ಲಿಸುವಂತೆ ಯಾರಿಗೂ ಮನವಿ ಮಾಡಿಲ್ಲ ಎಂದು 1993ರ...
ಸಂಜಯ್ ದತ್
ಸಂಜಯ್ ದತ್

ಮುಂಬೈ: ಕ್ಷಮಾಧಾನ ಕೋರಿ ಮಹಾರಾಷ್ಟ್ರ ರಾಜ್ಯಪಾಲರಿಗೆ ಯಾವುದೇ ಅರ್ಜಿ ಸಲ್ಲಿಸಿಲ್ಲ ಮತ್ತು ತಮ್ಮ ಪರವಾಗಿ ಅರ್ಜಿ ಸಲ್ಲಿಸುವಂತೆ ಯಾರಿಗೂ ಮನವಿ ಮಾಡಿಲ್ಲ ಎಂದು 1993ರ ಮುಂಬೈ ಸರಣಿ ಸ್ಫೋಟದ ಅಪರಾಧಿ ಹಾಗೂ ಬಾಲಿವುಡ್ ನಟ ಸಂಜಯ್ ದತ್ ಅವರು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.

ಮಹಾರಾಷ್ಟ್ರ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರು ಸಂಜಯ್ ದತ್ ಅವರ ಕ್ಷಮಾಧಾನ ಅರ್ಜಿ ತಿರಸ್ಕರಿಸಿದ್ದಾರೆ ಎಂಬ ವರದಿ ಹಿನ್ನೆಲೆಯಲ್ಲಿ ಇಂದು ಅವರ ವಕೀಲರಾದ ಹಿತೇಶ್ ಜೈನ್ ಹಾಗೂ ಸುಭಾಶ್ ಜಾಧವ್ ಅವರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

'ಸಂಜಯ್ ದತ್ ಆಗಲಿ ಅಥವಾ ಅವರ ಕುಟುಂಬದವರಾಗಲಿ ಯಾವತ್ತು ಕ್ಷಮಾಧಾನ ಕೋರಿ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿಲ್ಲ. ಅಲ್ಲದೆ ಅರ್ಜಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮಾರ್ಕೆಂಡೇಯ್ ಕಾಟ್ಜು ಅವರಿಗೂ ದತ್ ಅಥವಾ ಅವರ ಕುಟುಂಬ ಸದಸ್ಯರು ಕೇಳಿಕೊಂಡಿಲ್ಲ' ಎಂದು ದತ್ ವಕೀಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಟ್ಜು ಅವರು ಸ್ವಯಂ ಪ್ರೇರಿತರಾಗಿ, ದತ್ ಒಬ್ಬರಿಗೆ ಅಲ್ಲ ಪ್ರಕರಣದ ಎಲ್ಲಾ ಆರೋಪಿಗಳಿಗೂ ಕ್ಷಮೆ ಕೋರಿ ಅರ್ಜಿ ಸಲ್ಲಿಸಿದ್ದರು ಎಂದು ಅವರು ಹೇಳಿದ್ದಾರೆ.

ಸ್ಫೋಟದಲ್ಲಿ ನಟನ ಪಾತ್ರ ಇಲ್ಲ ಎಂದು ಸಾಬೀತಾಗಿದ್ದು, ಈಗಾಗಲೇ ಸಾಕಷ್ಟು ಶಿಕ್ಷೆ ಅನುಭವಿಸಿರುವ ಸಂಜಯ್ ದತ್ ಅವರಿಗೆ ಸಂವಿಧಾನದ ಕಲಂ 161ರ ಅಡಿ ಕ್ಷಮೆ ಕೋರಿ ಕಾಟ್ಜು 2013ರಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಮಹಾ ರಾಜ್ಯಪಾಲರು ಅದನ್ನು ನಿನ್ನೆ ತಿರಸ್ಕರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com