ಸ್ಟಾರ್ಟ್‍ಅಪ್‍ಗೆ ಈಗ ದೇಶದಲ್ಲಿ ಉತ್ತಮ ಪರಿಸರ

ದೇಶದಲ್ಲಿ ಸಂಶೋಧನಾ ಸಂಸ್ಥೆಗಳು, ಕ್ರಿಯೇಟಿವ್ ಮತ್ತು ಇನ್ನೋವೇಷನ್ ಹಬ್‍ಗಳ ಸ್ಥಾಪನೆ ಹೆಚ್ಚುತ್ತಿರುವುದು ಸ್ಟಾರ್ಟ್‍ ಅಪ್ ಆರಂಭಕ್ಕೆ...
ಸುರೇಶ್ ಪ್ರಭು
ಸುರೇಶ್ ಪ್ರಭು
ಮುಂಬೈ: ದೇಶದಲ್ಲಿ ಸಂಶೋಧನಾ ಸಂಸ್ಥೆಗಳು, ಕ್ರಿಯೇಟಿವ್ ಮತ್ತು ಇನ್ನೋವೇಷನ್ ಹಬ್‍ಗಳ ಸ್ಥಾಪನೆ ಹೆಚ್ಚುತ್ತಿರುವುದು ಸ್ಟಾಟ್ರ್ ಅಪ್ ಆರಂಭಕ್ಕೆ ಸೂಕ್ತ ಪರಿಸರ ನಿರ್ಮಿಸುತ್ತಿವೆ ಎಂದು ಹೂಡಿಕೆ ನೀತಿ ಮತ್ತು ಉತೇಜನ ಇಲಾಖೆ (ಡಿಐಪಿಪಿ) ಮಾಜಿ ಕಾರ್ಯದರ್ಶಿ ಅಜಯ್ ಶಂಕರ್ ಹೇಳಿದ್ದಾರೆ. ಹೊಸ ಕಂಪನಿ ಗಳಲ್ಲಿ ಹೂಡಿಕೆ ಮಾಡುವವರಿಗೂ ಇಂತಹ ವಾತಾವರಣ ಅಗತ್ಯವಾಗಿದೆ ಎಂದಿದ್ದಾರೆ. ಮೇಕ್ ಇನ್ ಇಂಡಿಯಾ ಕಾರ್ಯಕ್ರಮದೊಂದಿಗೆ ಸಂಯೋಜನೆ ನೆ-ಗೊಂಡು `ಸ್ಟಾರ್ಟ್‍ಅಪ್ ಮಿಷನ್' ಮುನ್ನಡೆಸುವಂತೆ ಪ್ರಧಾನಿ ಮೋದಿ ಆದೇಶಿಸಿದ್ದಾರೆ. ಇದರ ಭಾಗವಾಗಿ ಡಿಐಪಿಪಿ ಐಐಟಿ, ಐಐಎಂಗಳು, ಫ್ಲಿಪ್‍ಕಾರ್ಟ್, ಸ್ನಾಪ್‍ಡೀಲ್‍ನಂತಹ ಇ-ಕಾಮರ್ಸ್ ರಿಟೇಲ್ ಕಂಪನಿಗಳು, ಈಗಾಗಲೆ ಸ್ಟಾರ್ಟ್ ಅಪ್ ಆರಂಬಿsಸಿರುವವರು, ಹಲವು ಕಂಪನಿಗಳ ಪ್ರವರ್ತಕರೊಂದಿಗೆ ಮಾತುಕತೆ ನಡೆಸಿದೆ ಎಂದು ಅವರು ತಿಳಿಸಿದ್ದಾರೆ. ಭಾರತದ ತಯಾರಿಕಾ ವಲಯ ಕಾರ್ಮಿಕರ ಮೇಲೆ ಹೆಚ್ಚು ಅವಲಂಬಿಸಿರುವುದರಿಂದಾಗಿ ಜಾಗತಿಕ ಮಟ್ಟದಲ್ಲಿ ಜನಪ್ರಿಯತೆ ಗಳಿಸಿಲ್ಲ ವಿಷಾದನೀಯ ಎಂದ ಅವರು, ಚೀನಾದಲ್ಲಿ ಕಾರ್ಮಿಕರ ವೇತನ ಹೆಚ್ಚಿರುವುದರಿಂದ ಕಂಪನಿಗಳ ಆದಾಯ ಕಡಿಮೆ ಯಾಗುತ್ತಿದೆ. ಈ ಕಾರಣದಿಂದ ಅಲ್ಲಿನ ತಯಾರಿಕಾ ಕ್ಷೇತ್ರದಲ್ಲಿನ
10 ಕೋಟಿ ಉದ್ಯೋಗಗಳು ನೆರೆಯ ದೇಶಗಳಿಗೆ ವರ್ಗವಾಗುವ ನಿರೀಕ್ಷೆಗಳಿವೆ. ಇದರಲ್ಲಿ ಕನಿಷ್ಠ ಅರ್ಧದಷ್ಟು ಉದ್ಯೋಗ ಗಳನ್ನಾದರೂ ಪಡೆಯಲು ಭಾರತ ಈಗಲೆ ಕಾರ್ಯತಂತ್ರ ರೂಪಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com