
ಲಖನೌ: ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯದ ಕುಲಪತಿ ಆಯ್ಕೆ ಶೋಧನಾ ಸಮಿತಿಯಿಂದಲೇ ನಡೆಯುತ್ತದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ಸುಬ್ರಹ್ಮಣಿಯನ್ ಸ್ವಾಮಿ ಅವರಿಗೆ ಜೆ.ಎನ್.ಯು ಕುಲಪತಿ ಹುದ್ದೆ ನೀಡುವುದರ ಬಗ್ಗೆ ಪ್ರತಿಕ್ರಿಯಿಸಿದ ಸ್ಮೃತಿ ಇರಾನಿ, ಕಾನೂನು ಗೊತ್ತಿಲ್ಲದ ವ್ಯಕ್ತಿಗಳು ಈ ರೀತಿಯ ವದಂತಿ ಹಬ್ಬಿಸಿದ್ದಾರೆ. ಕೇಂದ್ರ ಸಚಿವರು ಕುಲಪತಿ ಹುದ್ದೆಯನ್ನು ಯಾರಿಗೂ ನೀಡಲು ಸಾಧ್ಯವಿಲ್ಲ. ಶೋಧನಾ ಸಮಿತಿಯಿಂದಲೇ ಆಯ್ಕೆ ನಡೆಯಬೇಕು ಎಂದು ಹೇಳಿದ್ದಾರೆ.
ಕುಲಪತಿ ಹುದ್ದೆಗೆ ನೇಮಕಾತಿ ನಡೆಯುವ ವೇಳೆ ವಯಸ್ಸನ್ನು ಪರಿಗಣಿಸಲಾಗುತ್ತದೆ. ಸುಬ್ರಹ್ಮಣಿಯನ್ ಸ್ವಾಮಿ ಹಿರಿಯರಾಗಿದ್ದು, ಅವರು ಕುಲಪತಿ ಹುದ್ದೆಗೆ ಸೂಕ್ತ ವಯೋಮಿತಿಯಲ್ಲಿಲ್ಲ ಎಂದು ಸ್ಮೃತಿ ಇರಾನಿ ತಿಳಿಸಿದ್ದಾರೆ. ಕೆಲ ಎಡಪಂಥೀಯರು ಭಯಗೊಂಡಿದ್ದು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.
Advertisement