ತಿರುಮಲದ ಕಪಿಲ ತೀರ್ಥ ಕಲ್ಯಾಣಿಯಲ್ಲಿ ಮುಳುಗಿ ನಾಲ್ವರು ಭಕ್ತರ ದುರ್ಮರಣ

ಸ್ನಾನಕ್ಕೆಂದು ಕಪಿಲ ತೀರ್ಥ ಕಲ್ಯಾಣಿಗೆ ಇಳಿದಿದ್ದ ನಾಲ್ವರು ಭಕ್ತರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಕಪಿಲ ತೀರ್ಥ
ಕಪಿಲ ತೀರ್ಥ
Updated on
ತಿರುಮಲ: ಸ್ನಾನಕ್ಕೆಂದು ಕಪಿಲ ತೀರ್ಥ ಕಲ್ಯಾಣಿಗೆ ಇಳಿದಿದ್ದ ನಾಲ್ವರು ಭಕ್ತರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. 
ಆಂಧ್ರದ ಚಿತ್ತೂರು ಜಿಲ್ಲೆ ತಿರುಮಲದಲ್ಲಿರುವ ಕಪಿಲ ತೀರ್ಥ ದೇವಸ್ಥಾನದ ಕಲ್ಯಾಣಿಗೆ ಒಳಹರಿವು ಹೆಚ್ಚಾಗಿ ಸ್ನಾನಗೆಂದು ಇಳಿದಿದ್ದ ಐವರ ಪೈಕಿ ನಾಲ್ವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಮತ್ತೊಬ್ಬನನ್ನು ರಕ್ಶಿಸಲಾಗಿದೆ. 
ತಿರುಮಲದಲ್ಲಿ ಎಡಬಿಡದೆ ಮಳೆ ಸುತ್ತಿರುವುದರಿಂದ ಜಲಪಾತದ ನೀರು ಕಲ್ಯಾಣಿಗೆ ಹರಿದಿದ್ದು, ಈ ವೇಳೆ ದುರ್ಘಟನೆ ಸಂಭವಿಸಿದೆ. 
ಮೃತರನ್ನು ತಿರುಪತಿಯ ಚಂದ್ರಶೇಖರ ರೆಡ್ಡಿ ಬಡಾವಣೆಯ ನಿವಾಸಿಗಳಾದ ವೆಂಕಟೇಶ್, ಶ್ರೀಕಾಂತ್, ತೌಹಿದ್, ಎಂದು ಗುರುತಿಸಲಾಗಿದ್ದು, ಇನ್ನೊಬ್ಬ ನ ಗುರುತು ಪತ್ತೆಯಾಗಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com