ಸಂಸದರ ವೇತನ, ಭತ್ಯೆ ಶಿಫಾರಸ್ಸಿಗೆ ಸಮಿತಿ ರಚನೆಗೆ ಮುಂದಾದ ಕೇಂದ್ರ ಸರ್ಕಾರ

ಸಂಸದರ ವೇತನ ಭತ್ಯೆ ಹೆಚ್ಚಳ ಶಿಫಾರಸ್ಸಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಲು ಮುಂದಾಗಿದೆ.
ಸಂಸದರ ವೇತನ, ಭತ್ಯೆ ಶಿಫಾರಸ್ಸಿಗೆ ಸಮಿತಿ ರಚನೆಗೆ ಮುಂದಾದ ಕೇಂದ್ರ ಸರ್ಕಾರ

ನವದೆಹಲಿ: ಸಂಸದರ ವೇತನ ಭತ್ಯೆ ಶಿಫಾರಸ್ಸಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಲು ಮುಂದಾಗಿದೆ.

ಸಂಸದೀಯ ವ್ಯವಹಾರಗಳ ಸಚಿವಾಲಯ ಸಮಿತಿ ರಚನೆಗೆ ಸಲಹೆ ನೀಡಿದ್ದು, ಸಂಸದರ ವೇತನ ಹಾಗೂ ಭತ್ಯೆಗೆ ಸಂಬಂಧಿಸಿದ ಶಿಫಾರಸ್ಸಿಗೆ ತ್ರಿಸದಸ್ಯ ವೇತನ ಆಯೋಗ ರಚನೆಯಾಗಲಿದೆ. ಅಖಿಲ ಭಾರತ ವಿಪ್ಸ್ ಕಾನ್ಫರೆನ್ಸ್ ಗಾಗಿ   ಸಚಿವಾಲಯದಿಂದ ಪ್ರಕಟವಾಗಿರುವ ಕಾರ್ಯಸೂಚಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ.

ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಚಿವಾಲಯದ ಪ್ರಕಟನೆ ತಿಳಿಸಿದೆ. ಆಂಧ್ರಪ್ರದೇಶದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹಲವು ರಾಜಕೀಯ ಪಕ್ಷಗಳ ನಾಯಕರು ಭಾಗವಹಿಸಲಿದ್ದಾರೆ. ಶಾಸಕಾಂಗ ಸಂಸ್ಥೆಗಳು ಉತ್ತಮ ಕಾರ್ಯನಿರ್ವಹಣೆ ಮಾಡುವುದರ ಬಗ್ಗೆ ಈ ಸಮ್ಮೇಳನದಲ್ಲಿ ಚರ್ಚೆ ನಡೆಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com