ದೆಹಲಿ, ಜೋದಾಪುರ್, ಕೋಝಿಕ್ಕೋಡ್ ಮತ್ತು ಲಕ್ನೋದಲ್ಲಿ ಮುಸ್ಲಿಂ ಸಂಘಟನೆಗಳು ಚಳವಳಿ ಆರಂಭಿಸಿದ್ದು ಇಸಿಸ್ ಸಂಘಟನೆಗಳ ವಿರುದ್ಧ ಹೋರಾಡಲು ಕರೆ ನೀಡಿವೆ. ಮುಗ್ಧ ಜನರನ್ನು ಪೈಶಾಚಿಕ ರೀತಿಯಲ್ಲಿ ಕೊಲ್ಲುವ ಇಸಿಸ್ ಮತ್ತು ಅದಕ್ಕೆ ಸಂಬಂಧಪಟ್ಟ ಉಗ್ರ ಸಂಘಟನೆಗಳು ಮುಸ್ಲಿಂ ಧರ್ಮಕ್ಕೆ ವಿರುದ್ಧವಾಗಿ ವರ್ತಿಸುತ್ತಿವೆ. ಅಂಥಾ ಸಂಘಟನೆಗಳಿಂದ ದೂರವಿರುವಂತೆ ಮುಸ್ಲಿಂ ಸಂಘಟನೆಗಳು ತಮ್ಮ ಧರ್ಮೀಯರಿಗೆ ಕರೆ ನೀಡಿವೆ.