ಭಾರತೀಯ ನೌಕಾಪಡೆಗೆ ಕ್ಷಿಪಣಿ ನಾಶಕ ಐಎನ್‌ಎಸ್ ಕೊಚ್ಚಿ ಸೇರ್ಪಡೆ

ದೇಶದ ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲನೀಡುವ ನಿಟ್ಟಿನಲ್ಲಿ ಸ್ವದೇಶಿ ತಂತ್ರಜ್ಞಾನ ಆಧಾರಿತವಾಗಿ ನಿರ್ಮಿತವಾಗಿರುವ ಎರಡನೆ ಐಎನ್‌ಎಸ್ ನೌಕೆ ಎಂಬ ...
ಐಎನ್ಎಸ್ ಕೊಚ್ಚಿ ಕ್ಷಿಪಣಿ ನಾಶಕ
ಐಎನ್ಎಸ್ ಕೊಚ್ಚಿ ಕ್ಷಿಪಣಿ ನಾಶಕ
Updated on

ಮುಂಬಯಿ: ದೇಶದ ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲನೀಡುವ ನಿಟ್ಟಿನಲ್ಲಿ ಸ್ವದೇಶಿ ತಂತ್ರಜ್ಞಾನ ಆಧಾರಿತವಾಗಿ ನಿರ್ಮಿತವಾಗಿರುವ ಎರಡನೆ ಐಎನ್‌ಎಸ್ ನೌಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಐಎನ್‌ಎಸ್ ಕೊಚ್ಚಿ’ ಇಂದು ಭಾರತೀಯ ನೌಕಪಡೆಗೆ ಸೇರ್ಪಡೆಗೊಂಡಿತು.

ನೌಕೆಯನ್ನು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್‌ ಮುಂಬೈಯ ನವಾಲ್ ಡಾಕಿಯಾರ್ಡ್‌ನಲ್ಲಿಂದು ಭಾರತೀಯ ನೌಕಪಡೆಗೆ ಅಧಿಕೃತವಾಗಿ ಸೇರ್ಪಡೆಗೊಳಿಸಿದರು. ಭಾರತೀಯ ಸೇನೆಗೆ ಮತ್ತಷ್ಟು ಬಲ ನೀಡಿರುವ ‘ಐಎನ್‌ಎಸ್ ಕೊಚ್ಚಿ’ ನೌಕೆಯನ್ನು ಮುಂಬೈಯ ಮಝಂಗಾವ್ ಡಾಕ್ ಶಿಪ್ ಬಿಲ್ಡರ್ಸ್‌ ಲಿ. ಕಂಪೆನಿ ನಿರ್ಮಿಸಿದೆ. 7500 ಟನ್ ತೂಕ ಸಾಮರ್ಥ್ಯದ ಈ ನೌಕೆ 30 ನಾಟಿಕಲ್ ವೇಗದಲ್ಲಿ ಸಂಚರಿಸಲಿದೆ.

 40 ಅಧಿಕಾರಿಗಳು ಹಾಗೂ 350 ಸಿಬ್ಬಂದಿ ಪ್ರಯಾಣಿಸಲು ವ್ಯವಸ್ಥೆ ಹೊಂದಿರುವ ‘ಐಎನ್‌ಎಸ್ ಕೊಚ್ಚಿ’ಯನ್ನು 2009ರ ಸೆಪ್ಟಂಬರ್ 18ರಂದು ಪ್ರಾಯೋಗಿಕ ಪ್ರಯೋಗ ಮಾಡಲಾಗಿತ್ತು. ಅದು ಇಂದು ದೇಶದ ಸೇವೆಗೆ ಸೇರ್ಪಡೆಗೊಂಡಿದೆ. ‘ಐಎನ್‌ಎಸ್ ಕೊಚ್ಚಿ’ ನೌಕೆಯು ಸಬ್ ಮೆರಿನ್ ಗಾಳಿಯನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಇದರಲ್ಲಿ ಹೆಲಿಕಾಪ್ಟರ್‌ನ್ನು ಇಳಿಸಲು ಕೂಡಾ ಅವಕಾಶವಿದೆ.

ಶತ್ರು ಪಡೆಯ ಕ್ಷಿಪಣಿಗಳು ಹಾಗೂ ಹಡಗುಗಳನ್ನು ಕ್ಷಣ ಮಾತ್ರದಲ್ಲಿ ನಾಶ ಮಾಡಬಲ್ಲ ಅಸಾಧಾರಣ ಸಾಮರ್ಥ್ಯ ಹೊಂದಿರುವ ಕೊಲ್ಕೊತಾ-ಕ್ಲಾಸ್‌ (ಪ್ರಾಜೆಕ್ಟ್‌ 15ಎ)ನ ಎರಡನೇ ಸಮರ ನೌಕೆ ಇದು. ನೌಕಾ ಪಡೆ ಸೇವೆಗೆ ಸಮರ ನೌಕೆಗಳನ್ನು ನಿಯೋಜಿಸುವ ಸಂಪ್ರದಾಯ ಬಹಳ ಹಿಂದಿನಿಂದಲೂ ರೂಢಿಯಲ್ಲಿದೆ.

ಮುಂಬಯಿನ ಮಡಗಾವ್ ನೌಕಾಕಟ್ಟೆಯಲ್ಲಿ ನಾಲ್ಕು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನೌಕಾ ಪಡೆಯ ನಿರ್ದೇಶನದ ಮೇರೆಗೆ ನೌಕೆಯನ್ನು ನಿರ್ಮಿಸಲಾಗಿದೆ.

'ಅಗಾಧ ಸಾಮರ್ಥ್ಯ ಹೊಂದಿರುವ, ಕ್ಷಿಪಣಿಗಳಗಳನ್ನು ನಾಶಮಾಡಬಲ್ಲ ಸಾಮರ್ಥ್ಯವಿರುವ ಈ ನೌಕೆಯು ಸೂಕ್ಷ್ಮ ಸಂವೇದಕಗಳು ಹಾಗೂ ಶಸ್ತ್ರಾಸ್ತ್ರಗಳನ್ನು ಒಳಗೊಂಡ ಶಕ್ತಿಶಾಲಿ ನೌಕೆ,' ಎಂದು ಭಾರತೀಯ ನೌಕಾಪಡೆ ಮೂಲಗಳು ತಿಳಿಸಿವೆ. 'ಕೋಲ್ಕೊತಾ ಕ್ಲಾಸ್‌ನ ಮೂರು ಸಮರ ನೌಕೆ ನಿರ್ಮಾಣದ ಒಪ್ಪದದಂತೆ, ದಿಲ್ಲಿ ಕ್ಲಾಸ್‌ ಕ್ಷಿಪಣಿ ನಾಶಕ ನೌಕೆ ದಶಕದ ಹಿಂದೆಯೇ ಸೇವೆಗೆ ನಿಯೋಜನೆ ಗೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com