ನವದೆಹಲಿ: ಚಂದ್ರಕಾಂತ ಶಿಲೆಯಿಂದ ನಿರ್ಮಿಸಲ್ಪಟ್ಟ ತಾಜ್‌ಮಹಲ್‌ನ ಬಣ್ಣ ವಾಯು ಮಾಲಿನ್ಯದಿಂದಾಗಿ ಮಾಸಿ ಹೋಗಿದೆ. ಬಿಳಿ ಬಣ್ಣದಿಂದ ಹೊಳೆಯುತ್ತಿದ್ದ ತಾಜ್ ಮಹಲ್ ಈಗ ಅಂದಗೆಟ್ಟು ನಸು ಹಳದಿ ಬಣ್ಣಕ್ಕೆ ತಿರುಗಿದೆ. ಈ ಹಳದಿ ಬಣ್ಣದ ಕಲೆಗಳನ್ನು ತೆಗೆಯಲು ಕನಿಷ್ಠ 9 ವರ್ಷಗಳೇ ಬೇಕು ಅಂತಿದ್ದಾರೆ ಪುರಾತತ್ವ ಶಾಸ್ತ್ರ ಇಲಾಖೆಯ ತಜ್ಞರು.
ಆಗ್ರಾದಲ್ಲಿ 17 ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟ ಈ ಐತಿಹಾಸಿಕ ಸ್ಮಾರಕವು ಅಲ್ಲಿರುವ ಕಲ್ಲಿದ್ದಲು ಕಾರ್ಖಾನೆಗಳಿಂದ ಹೊರ ಸೂಸುವ ಮಲಿನ ಗಾಳಿಯಿಂದಾಗಿ ಅಂದ ಕಳೆದುಕೊಂಡಿದೆ.
ಮಡ್ ಪ್ಯಾಕ್ ಬಳಸಿ ತಾಜ್‌ನ್ನು ಶುಭ್ರಗೊಳಿಸುವ ಯೋಜನೆಯನ್ನು ಕಳೆದ ವರ್ಷವೇ ಘೋಷಿಸಲಾಗಿತ್ತು. ಆದರೆ ಇನ್ನೂ ಈ ಯೋಜನೆ ಅನುಷ್ಠಾನಕ್ಕೆ ಬಂದಿಲ್ಲ.
ಭಾರತದ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾದ ತಾಜ್ ಮಹಲ್ ನ್ನು 1631ರಲ್ಲಿ ಮೊಘಲ್ ಚಕ್ರವರ್ತಿ ಶಾಹ್‌ಜಹಾನ್ ತನ್ನ ಪ್ರೀತಿಯ ಮಡದಿ ಮುಮ್ತಾಜ್ ಮಹಲ್‌ಳ ನೆನಪಿಗೋಸ್ಕರ ನಿರ್ಮಿಸಿದ್ದನು.