ಚಂದ್ರಬಾಬು ನಾಯ್ಡು
ದೇಶ
ಟಿಡಿಪಿ ಕೇಂದ್ರ ಸಮಿತಿ ರಚನೆ, ನಾಯ್ಡು ಪುತ್ರ ಪ್ರಧಾನ ಕಾರ್ಯದರ್ಶಿ
ತೆಲುಗು ದೇಶಂ ಪಕ್ಷ(ಟಿಡಿಪಿ)ದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಬುಧವಾರ ಪಕ್ಷದ ಕೇಂದ್ರ ಸಮಿತಿ...
ವಿಜಯವಾಡ: ತೆಲುಗು ದೇಶಂ ಪಕ್ಷ(ಟಿಡಿಪಿ)ದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಬುಧವಾರ ಪಕ್ಷದ ಕೇಂದ್ರ ಸಮಿತಿ ರಚಿಸಿದ್ದು, ಅದಕ್ಕೆ ತಮ್ಮ ಪುತ್ರ ಎನ್.ಲೋಕೇಶ್ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದಾರೆ.
ಪಕ್ಷದ 33 ವರ್ಷದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕೇಂದ್ರ ಸಮಿತಿ ಹಾಗೂ ಅಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ ರಾಜ್ಯ ಸಮಿತಿಯನ್ನು ರಚಿಸಲಾಗಿದೆ. ಈ ಮೂಲಕ ಆಂಧ್ರ ವಿಭಜನೆ ನಂತರ ಟಿಡಿಪಿ ರಾಷ್ಟ್ರೀಯ ಪಕ್ಷವಾಗಿ ಹೊರ ಹೊಮ್ಮುವ ನಿರ್ಧಾರಕ್ಕೆ ಬಂದಿದೆ.
ಟಿಡಿಪಿಯ ಆಂಧ್ರಪ್ರದೇಶ ಘಟಕಕ್ಕೆ ಮಾಜಿ ಗೃಹ ಸಚಿವ ಕಿಮಿದಿ ಕಲಾ ವೆಂಕಟ ರಾವ್ ಅವರನ್ನು ಹಾಗೂ ತೆಲಂಗಾಣಕ್ಕೆ ಎಲ್.ರಮಣ ಅವರನ್ನು ಮುಖ್ಯಸ್ಥರನ್ನಾಗಿ ನಾಯ್ಡು ನೇಮಿಸಿದ್ದಾರೆ.
ಇನ್ನು ಮತಕ್ಕಾಗಿ ಲಂಚ ಹಗರಣದಲ್ಲಿ ಬಂಧನಕ್ಕೊಳಗಾಗಿದ್ದ ಎ.ರೆವಂತ್ ರೆಡ್ಡಿ ಅವರನ್ನು ತೆಲಂಗಾಣ ಸಮಿತಿಯ ಕಾರ್ಯಾಧ್ಯಕ್ಷರನ್ನಾಗಿ ನೇಮಸಿಲಾಗಿದೆ.


