ಮೃತ ವ್ಯಕ್ತಿ ಕುಟುಂಬಕ್ಕೆ ಉ.ಪ್ರ. ಸರ್ಕಾರದಿಂದ 10 ಲಕ್ಷ ರು. ಪರಿಹಾರ

ಗೋಮಾಂಸ ಸೇವನೆ ಶಂಕೆ ಹಿನ್ನೆಲೆ 50 ವರ್ಷದ ವ್ಯಕ್ತಿಯನ್ನು ಉದ್ರಿಕ್ತ ಗುಂಪೊಂದು ಹತ್ಯೆ ಮಾಡಿತ್ತು. ಈ ಸಂಬಂಧ ಉತ್ತರಪ್ರದೇಶ ಸರ್ಕಾರ ಮೃತ ವ್ಯಕ್ತಿ...
ಪೊಲೀಸ್
ಪೊಲೀಸ್
ಉತ್ತರಪ್ರದೇಶ: ಗೋಮಾಂಸ ಸೇವನೆ ಶಂಕೆ ಹಿನ್ನೆಲೆ 50 ವರ್ಷದ ವ್ಯಕ್ತಿಯನ್ನು ಉದ್ರಿಕ್ತ ಗುಂಪೊಂದು ಹತ್ಯೆ ಮಾಡಿತ್ತು. ಈ ಸಂಬಂಧ ಉತ್ತರಪ್ರದೇಶ ಸರ್ಕಾರ ಮೃತ ವ್ಯಕ್ತಿ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿದೆ. 
ಮುಸ್ಲಿಂ ಕುಟುಂಬವೊಂದು ಗೋ ಮಾಂಸ ತಿಂದಿದೆ ಎಂಬ ಗಾಳಿ ಸುದ್ದಿ ಕೇಳಿದ ದಾದ್ರಿ ಗ್ರಾಮಸ್ಥರು ಇಟ್ಟಿಗೆ, ದೊಣ್ಣೆಯಿಂದ ಮೊಹಮ್ಮದ್ ಅಖಾಲಖ್ ಮತ್ತು ಮಗ(22) ನನ್ನು ಮನೆಯಿಂದ ಹೊರಗೆಳೆದು ಮನಬಂದಂತೆ ಥಳಿಸಿದ್ದರು. ಹೊಡೆದ ಏಟಿಗೆ ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಮೊಹಮ್ಮದ್ ಸಾವನ್ನಪ್ಪಿದ್ದು, ಮಗನ ಪರಿಸ್ಥಿತಿ ಗಂಭೀರವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಸರ್ಕಾರ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿದ್ದು, ಪ್ರಕರಣದ ತನಿಖೆ ಆದೇಶಿಸಿದೆ.
ನಮ್ಮ ಮನೆಯಲ್ಲಿ ಇದ್ದಿದ್ದು ಮಟನ್, ಗೋ ಮಾಂಸ ಅಲ್ಲ:
ನಮ್ಮ ಮನೆಯ ಫ್ರಿಡ್ಜ್ ನಲ್ಲಿ ಕೇವಲ ಮಟನ್ ಮಾತ್ರ ಇತ್ತು. ಪೊಲೀಸರು ಮಾಂಸವನ್ನು ಪರೀಕ್ಷಿಸಲು ತೆಗೆದುಕೊಂಡು ಹೋಗಿರುವುದಾಗಿ ಮೊಹಮ್ಮದ್ ಪುತ್ರಿ ತಿಳಿಸಿದ್ದಾಳೆ. ಈ ಮುಸ್ಲಿಂ ಕುಟುಂಬ ಕಳೆದ ಮೂರು ದಶಕಗಳಿಂದ ಈ ಗ್ರಾಮದಲ್ಲಿ ವಾಸವಾಗಿದ್ದರು. ಅಲ್ಲದೇ ಗೋ ಮಾಂಸ ತಿಂದಿದ್ದಾರೆಂಬ ಊಹಾಪೋಹ ಹೇಗೆ ಆರಂಭವಾಯಿತು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com