100 ಕೋಟಿ ದಾಟುತ್ತಿದೆ ಆಧಾರ್ ನೋಂದಣಿ ಕಾರ್ಯ, ಸರ್ಕಾರಿ ಯೋಜನೆಗಳಿಗೆ ಉತ್ತೇಜನ

ಆಧಾರ್ ನೋಂದಣಿ 100 ಕೋಟಿ ತಲುಪುತ್ತಿದ್ದು, ಆ ಮೂಲಕ ಕೇಂದ್ರದ ಯೋಜನೆಗಳಿಗೆ ಉತ್ತೇಜನ ನೀಡಲು ಮುಂದಾಗಿದೆ. ..
ಆಧಾರ್ ಲೋಗೋ
ಆಧಾರ್ ಲೋಗೋ
Updated on

ನವದೆಹಲಿ: ಮುಂದಿನ ದಿನಗಳಲ್ಲಿ ಆಧಾರ್ ನೋಂದಣಿ 100 ಕೋಟಿ ತಲುಪುತ್ತಿದ್ದು, ಆ ಮೂಲಕ ಕೇಂದ್ರದ ಯೋಜನೆಗಳಿಗೆ ಉತ್ತೇಜನ ನೀಡಲು ಮುಂದಾಗಿದೆ.  ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡಿರುವ ಸರ್ಕಾರ ಸಾಮಾಜಿಕ ವಲಯಗಳಲ್ಲಿ ಯೋಜನೆಯ ಉಪಯೋಗ ಪಡೆಯುವಂತೆ ಅನುಕೂಲ ಮಾಡಿಕೊಡಲು ಮುಂದಾಗಿದೆ.

ಭಾರತೀಯ ವಿಶೇಷ ಗುರುತು ಪ್ರಾಧಿಕಾರ ಆಧಾರ್ ಯೋಜನೆ ಅನುಷ್ಠಾನಗೊಳಿಸಲು  ಮುಂದಾಗಿದ್ದು 99.91 ಕೋಟಿ ಸಂಖ್ಯೆಯ ಆಧಾರ್ ನೋಂದಣಿಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಆಧಾರ್ ನೋಂದಣಿ 100 ಕೋಟಿ ತಲುಪಲಿದೆ.

ಆಧಾರ್ ಮಸೂದೆಯನ್ನು ಸಂಸತ್ತಿನ ಎರಡು ಸದನಗಳಲ್ಲೂ ಅಂಗೀಕರಿಸಿದ್ದು, ಭಾರತೀಯ ವಿಶೇಷ ಗುರುತು ಪ್ರಾಧಿಕಾರ ತನ್ನ ವೆಬ್ ಸೈಟ್ ನಲ್ಲಿ ನೋಂದಣಿಯಾಗಿರುವ ಸಂಖ್ಯೆಯನ್ನು ಇನ್ನೂ ಅಪ್ ಡೇಟ್ ಮಾಡಿಲ್ಲ ಎಂದು ಕೇಂದ್ರ ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಡೈರೆಕ್ಟ್ ಭೆನಿಫಿಟ್ ಟ್ರಾನ್ಸ್ಫರ್ ಯೋಜನೆಯಡಿ, ಅಡುಗೆ ಅನಿಲ, ಸ್ಕಾಲರ್ ಶಿಪ್, ಪಿಂಚಣಿ  ಮತ್ತು ಬ್ಯಾಂಕ್ ಖಾತೆಗಳಲ್ಲಿ ಅಧಾರ್ ನೀಡಿ ಉಪಯೋಗ ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com