
ನವದೆಹಲಿ: ಏರ್ ಇಂಡಿಯಾ ವಿಮಾನ ಸಿಬ್ಬಂದಿ ಇನ್ನು ಮುಂದೆ ಖಾದಿ ಸಮವಸ್ತ್ರ ಧರಿಸಲಿದ್ದಾರೆ.
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಏರ್ ಇಂಡಿಯಾ ವಿಮಾನದ ಆಡಳಿತ ಮಂಡಳಿ ಜೊತೆ ಒಪ್ಪಂದ ಮಾಡಿಕೊಂಡಿದೆ.ಮಹಿಳೆಯರಿಗೆ ಖಾದಿ ರೇಷ್ಮೆ ಸೀರೆ, ರವಿಕೆ, ಪುರುಷರಿಗೆ ಖಾದಿ ಪ್ಯಾಂಟ್ ಮತ್ತು ಷರ್ಟ್ ಗಳನ್ನು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಪೂರೈಸಲಿದೆ.
ಇನ್ನೂ ವಿಮಾನ ಪ್ರಯಾಣದ ವೇಳೆ ಪ್ರಯಾಣಿಕರಿಗೆ ಖಾದಿ ವಸ್ತ್ರಗಳು ಸಿಗಲಿವೆ. ವಿದೇಶ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿಮಾನ ಸಿಬ್ಬಂದಿ ಮೊದಲ ಬಾರಿಗೆ ಈ ಖಾದಿ ಸಮವಸ್ತ್ರ ಧರಿಸಲಿದ್ದಾರೆ.
ಏರ್ ಇಂಡಿಯಾ ವಿಮಾನದ ನಂತರ ಇತರೆ ಏರ್ ಲೈನ್ಸ್ ಗಳೊಂದಿಗೂ ಖಾದಿ ಸಮವಸ್ತ್ರ ಪೂರೈಸುವ ಸಂಬಂಧ ಕರಾರು ಮಾಡಿಕೊಳ್ಳಲು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಚಿಂತನೆ ನಡೆಸುತ್ತಿದೆ.
ಇನ್ನು ರಾಜ್ಯ ಸರ್ಕಾರದ ಉದ್ಯೋಗಿಗಳಿಗೆ ಹಾಗೂ ಗೆಸ್ಟ್ ಹೌಸ್ ಸಿಬ್ಬಂದಿಗೆ ಖಾದಿ ಸಮವಸ್ತ್ರ ನೀಡುವಂತೆ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ ಚರ್ಚೆ ನಡೆಸಿದೆ. ಈಗಾಗಲೇ ಗೋವಾ ಸರ್ಕಾರ ಗೆಸ್ಟ್ ಹೌಸ್ ಗಳಲ್ಲಿ ಕೆಲಸ ನಿರ್ವಹಿಸುವ ಸರ್ಕಾರಿ ಸಿಬ್ಬಂದಿಗೆ ಖಾದಿ ಸಮವಸ್ತ್ರ ನೀಡಲು ನಿರ್ಧರಿಸಿದೆ.
Advertisement