ಸ್ಟಾರ್‌ವಾರ್ಸ್ ನಲ್ಲಿರುವಂಥಾ ಆಯುಧಗಳನ್ನು ತಯಾರಿಸುತ್ತಿದೆ ಡಿಆರ್‌ಡಿಒ

ಇದೀಗ ಅತ್ಯಾಧುನಿಕ ಮಿಲಿಟರಿ ಪಡೆಯಲ್ಲಿಯೂ ಇಂಥಾ ಆಯುಧಗಳನ್ನು ಬಳಸುವ ಬಗ್ಗೆ ಚಿಂತನೆ ನಡೆದಿದೆ. ಅಮೆರಿಕ, ರಷ್ಯಾ, ಚೀನಾ ಮೊದಲಾದ ದೇಶಗಳು ಅತ್ಯಾಧುನಿಕ...
ಪ್ರಬಲ ಕಿರಣಗಳನ್ನು ಸೂಸುವ ಆಯುಧ
ಪ್ರಬಲ ಕಿರಣಗಳನ್ನು ಸೂಸುವ ಆಯುಧ
Updated on
ನವದೆಹಲಿ: ಸಯನ್ಸ್ ಫಿಕ್ಷನ್‌ಗಳಿಂದ ಹಿಡಿದು ಸ್ಟಾರ್‌ವಾರ್ ಸಿನಿಮಾಗಳವರೆಗೆ ಪ್ರಬಲ ಕಿರಣಗಳನ್ನು ಸೂಸುವ ಆಯುಧ (DEW) ಗಳನ್ನು ಬಳಸಿ ಯುದ್ಧ ಮಾಡುವುದನ್ನು ನೋಡಿದ್ದೇವೆ. ಮನುಷ್ಯರನ್ನು ಮತ್ತು ವಸ್ತುಗಳನ್ನು ಗುರಿಯಿಟ್ಟು ಅವುಗಳನ್ನು ನಾಶ ಮಾಡುವುದಕ್ಕಾಗಿ ಇಂಥಾ ಆಯುಧಗಳನ್ನು ಬಳಸುತ್ತಿದ್ದು ಲೇಸರ್ ಕಿರಣಗಳನ್ನು ಈ ಆಯುಧಗಳು ಹೊಂದಿವೆ.
ಇದೀಗ ಅತ್ಯಾಧುನಿಕ ಮಿಲಿಟರಿ ಪಡೆಯಲ್ಲಿಯೂ ಇಂಥಾ ಆಯುಧಗಳನ್ನು ಬಳಸುವ ಬಗ್ಗೆ ಚಿಂತನೆ ನಡೆದಿದೆ. ಅಮೆರಿಕ, ರಷ್ಯಾ, ಚೀನಾ ಮೊದಲಾದ ದೇಶಗಳು ಅತ್ಯಾಧುನಿಕ ಆಯುಧಗಳನ್ನು ಬಳಸಲು ತಯಾರು ನಡೆಸುತ್ತಿದ್ದು, ಭಾರತವೂ ಇದೇ ರೀತಿಯ ಆಯುಧಗಳ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ.
 ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ ) ಈಗಾಗಲೇ 10 ಕಿ.ವ್ಯಾಟ್ DEW ನಿರ್ಮಾಣದ ಸಿದ್ಧತೆ ನಡೆಸಿದೆ. 
ಹೈದ್ರಾಬಾದ್ ನಲ್ಲಿರುವ ಹೈಎನರ್ಜಿ ಸಿಸ್ಟಮ್ಸ್ ಆ್ಯಂಡ್ ಸಯನ್ಸೆಸ್ (ಚೆಸ್) ನಿಂದ ಈ ಆಯುಧವನ್ನು ಪರೀಕ್ಷೆಗೊಳಪಡಿಸಲಾಗಿದೆ. ಅಷ್ಟೇ ಅಲ್ಲದೆ ಕಳೆದ ವರ್ಷ ಹರ್ಯಾಣದಲ್ಲಿ  ಟರ್ಮಿನಲ್ ಬಾಲೆಸ್ಟಿಕ್ಸ್ ರಿಸರ್ಚ್ ಲ್ಯಾಬೋರೇಟರಿಯಲ್ಲಿ ಇದರ ಪ್ರಾತ್ಯಕ್ಷಿಕೆ ನೀಡಲಾಗಿತ್ತು. 
ಏನಿದು ಡಿಇಡಬ್ಲ್ಯೂ ?(Directed energy weapons- DEW)
ಇಲೆಕ್ಟ್ರಾನಿಕ್ ಮ್ಯಾಗ್ನೆಟಿಕ್ ಎನರ್ಜಿ ಅಥವಾ ಸಬ್ ಅಟೋಮಿಕ್ ಪಾರ್ಟಿಕಲ್‌ಗಳ ಪ್ರಬಲ ಸಂಯೋಗ ಕಿರಣಪುಂಜವನ್ನು ಬಳಸಿ ತಯಾರಿಸಲ್ಪಟ್ಟ ಆಯುಧಗಳಾಗಿವೆ ಇವು. ಇವುಗಳು ಪ್ರಬಲವಾದ ಲೇಸರ್ ಕಿರಣಗಳಾಗಿದ್ದು, ಹೈ ಪವರ್ ಮೈಕ್ರೋವೇವ್ ಅಥವಾ ಚಾರ್ಜ್‌ಡ್ ಪಾರ್ಟಿಕಲ್ ಪುಂಜಗಳಾಗಿವೆ.
ಕ್ಷಿಪಣಿಯೊಂದನ್ನು ಹೊಡೆದುರುಳಿಸಲು ಲೇಸರ್ ಆಯುಧವೊಂದಕ್ಕೆ 500 ಕಿಲೋವ್ಹಾಟ್ ಕಿರಣಪುಂಜ ಬೇಕಾಗುತ್ತದೆ. ಕಡಿಮೆ ಶಕ್ತಿಯಿಕುವ ಲೇಸರ್ ಆಯುಧಗಳು ಡ್ರೋನ್, ವಾಹನ ಅಥವಾ ಇನ್ನಿತರ ವಸ್ತುಗಳನ್ನು ನಾಶ ಮಾಡಬಲ್ಲವುಗಳಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com