'ವಂದೆ ಮಾತರಂ' ನಿಜವಾದ ರಾಷ್ಟ್ರಗೀತೆ: ಆರ್ ಎಸ್ ಎಸ್ ನಾಯಕ

ಸಾಂವಿಧಾನಿಕವಾಗಿ ಕಡ್ಡಾಯಗೊಳಿಸಿರುವ ಜನ ಗಣ ಮನವನ್ನು ರಾಷ್ಟ್ರಗೀತೆಯೆಂದು ಕರೆಯಲು ವಿರೋಧ ವ್ಯಕ್ತಪಡಿಸಿರುವ...
ಭಯ್ಯಾಜಿ ಜೋಶಿ
ಭಯ್ಯಾಜಿ ಜೋಶಿ
Updated on
ಮುಂಬೈ: ಸಾಂವಿಧಾನಿಕವಾಗಿ ಕಡ್ಡಾಯಗೊಳಿಸಿರುವ ಜನ ಗಣ ಮನವನ್ನು ರಾಷ್ಟ್ರಗೀತೆಯೆಂದು ಕರೆಯಲು ವಿರೋಧ ವ್ಯಕ್ತಪಡಿಸಿರುವ ಆರ್​ಎಸ್​ಎಸ್ ಪ್ರಧಾನ ಕಾರ್ಯದರ್ಶಿ ಭಯ್ಯಾಜಿ ಜೋಶಿ, ವಂದೇ ಮಾತರಂ ನಿಜವಾದ ರಾಷ್ಟ್ರಗೀತೆ ಎಂದು ಹೇಳಿದ್ದಾರೆ.
ಜನ ಗಣ ಮನ ನಮ್ಮ ರಾಷ್ಟ್ರಗೀತೆ. ಅದಕ್ಕೆ ನಮ್ಮ ಗೌರವವಿದೆ. ಆದರೆ, ನಿಜವಾಗಿ ಅರ್ಥ ಮಾಡಿಕೊಂಡರೆ, ವಂದೆ ಮಾತರಂ ನಮ್ಮ ರಾಷ್ಟ್ರಗೀತೆಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ. 
ರಾಜ್ಯಗಳನ್ನು ಗಣನೆಗೆ ತೆಗೆದುಕೊಂಡು ಜನ ಗಣ ಮನವನ್ನು ರಚಿಸಲಾಗಿದೆ. ಆದರೆ, ವಂದೇ ಮಾತರಂ ನಮ್ಮ ದೇಶದ ಪಾತ್ರ ಮತ್ತು ಶೈಲಿಯನ್ನು ವರ್ಣಿಸುತ್ತದೆ. ಇದು ಇವರೆಡರ ನಡುವೆ ಇರುವ ವ್ಯತ್ಯಾಸ. ಹಾಗಾಗಿ, ಎರಡು ಗೀತೆಗಳನ್ನು ಗೌರವಿಸಬೇಕು ಎಂದು ಅವರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com