ರಾಷ್ಟ್ರಗೀತೆ, ರಾಷ್ಟ್ರಧ್ವಜ ಬದಲಿಸಬೇಕೆಂದು ಜೋಶಿ ಹೇಳಿಲ್ಲ: ಆರ್ ಎಸ್ ಎಸ್ ಸ್ಪಷ್ಟನೆ

ದೇಶದ ರಾಷ್ಟ್ರಗೀತೆ ಅಥವಾ ರಾಷ್ಟ್ರಧ್ವಜ ಬದಲಿಸಬೇಕು ಎಂದು ಭಯ್ಯಾಜಿ ಜೋಶಿ ಹೇಳಿಲ್ಲ ಎಂದು ಆರ್ ಎಸ್ ಎಸ್ ಸ್ಪಷ್ಟನೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ದೇಶದ ರಾಷ್ಟ್ರಗೀತೆ ಅಥವಾ ರಾಷ್ಟ್ರಧ್ವಜ ಬದಲಿಸಬೇಕು ಎಂದು ಭಯ್ಯಾಜಿ ಜೋಶಿ ಹೇಳಿಲ್ಲ ಎಂದು ಆರ್ ಎಸ್ ಎಸ್ ಸ್ಪಷ್ಟನೆ ನೀಡಿದೆ. 
ಆರ್ ಎಸ್ ಎಸ್ ಪ್ರಧಾನ ಕಾರ್ಯದರ್ಶಿ ಭಯ್ಯಾಜಿ ಜೋಶಿ ಅವರು ನಿನ್ನೆ, ವಂದೇ ಮಾತರಂ ನಿಜವಾದ ರಾಷ್ಟ್ರಗೀತೆ ಎಂದು ಹೇಳಿಕೆ ನೀಡಿದ್ದರು. 
ಜೋಶಿ ಹೇಳಿಕೆ ಹೊಸ ವಿವಾದ ಎದುರಾಗುತ್ತಿದ್ದಂತೆಯೇ ಸ್ಪಷ್ಟನೇ ನೀಡಿರುವ ಆರ್ ಎಸ್ ಎಸ್ ವಕ್ತಾರ ಮನಮೋಹನ್ ವೈದ್ಯ, ರಾಜ್ಯ ಮತ್ತು ರಾಷ್ಟ್ರಗಳ ನಡುವಿನ ವ್ಯತ್ಯಾಸವನ್ನು ಜೋಶಿ ವಿವರಿಸಿದ್ದಾರೆ ಹೊರತು, ರಾಷ್ಟ್ರಗೀತೆ ಮತ್ತು ರಾಷ್ಟ್ರ ಧ್ವಜ ಬದಲಿಸಬೇಕು ಎಂದಲ್ಲ. 
ಎರಡನ್ನೂ ಸಮಾನವಾಗಿ ಗೌರವಿಸಬೇಕು ಮತ್ತು ಪೂಜಿಸಬೇಕು ಎಂಬದಷ್ಟೇ ಅವರು ಬಯಸಿದ್ದರು ಎಂದ ಅವರು, 1947ರಲ್ಲಿ ಸಂವಿಧಾನ ಸಭೆಯು ತ್ರಿವರ್ಣ ಧ್ವಜವನ್ನು ಅಧಿಕೃತ ಧ್ವಜ ಎಂದು ಮಾನ್ಯ ಮಾಡಿತ್ತು. ದೇಶವು ಗಣರಾಜ್ಯ ಆದ ಬಳಿಕ ಅದನ್ನೇ ರಾಷ್ಟ್ರಧ್ವಜವನ್ನಾಗಿ ಮುಂದುವರಿಸಲಾಯಿತು. ಕೇಸರಿ ಧ್ವಜವನ್ನು ಭಾರತೀಯರು ಪೂಪಾತನ ಸಂಸ್ಕೃತಿಯ ಸಂಕೇತವಾಗಿ ಪೂಜ್ಯ ಭಾವನೆಯಿಂದ ಅನಾದಿಕಾಲದಿಂದಲೂ ಗೌರವಿಸುತ್ತಿದ್ದರು ಎಂದು ಭಯ್ಯಾಜಿ ಹೇಳಿದ್ದು ಎಂದು ಸ್ಪಷ್ಟನೇ ನೀಡಿದ್ದಾರೆ. 
ಇದೇ ರೀತಿ ಜನಗಣಮನ ಮತ್ತು ವಂದೇ ಮಾತರಂ ಗೀತೆಗಳನ್ನು ವಿಶ್ಲೇಸಿದ್ದಾರೆ ಎಂದು ವೈದ್ಯ ತಿಳಿಸಿದ್ದಾರೆ. 
ಜನಗಣ ಮನ ಈಗ ನಮ್ಮ ರಾಷ್ಟ್ರಗೀತೆ. ಅದನ್ನು ಗೌರವಿಸಬೇಕು. ಆದರೆ, ಅದು ನಮ್ಮ ಸಂವೀಧಾನ ಘೋಷಿಸಿದ ರಾಷ್ಟ್ರಗೀತೆ. ನಿಜವಾದ ಅರ್ಥದಲ್ಲಿ ಹೇಳುವುದಾದರೆ, ವಂದೇ ಮಾತರಂ ನಮ್ಮ ರಾಷ್ಟ್ರಗೀತೆ ಎಂದು ಭಯ್ಯಾಜಿ ಜೋಶಿ ನಿನ್ನೆ ಹೇಳಿಕೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com