ದೆಹಲಿ ವಿಶ್ವವಿದ್ಯಾಲಯದ 22ಕ್ಕೂ ಹೆಚ್ಚು ಕಾಲೇಜುಗಳಲ್ಲಿ ಪ್ರಾಂಶುಪಾಲರೇ ಇಲ್ಲ

ದೆಹಲಿ ವಿಶ್ವವಿದ್ಯಾಲಯದರಡಿ ಬರುವ 22ಕ್ಕೂ ಹೆಚ್ಚು ಕಾಲೇಜುಗಳಲ್ಲಿ ಪ್ರಾಂಶುಪಾಲರೇ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವೆದೆಹಲಿ: ದೆಹಲಿ ವಿಶ್ವವಿದ್ಯಾಲಯದರಡಿ ಬರುವ 22ಕ್ಕೂ ಹೆಚ್ಚು ಕಾಲೇಜುಗಳಲ್ಲಿ ಪ್ರಾಂಶುಪಾಲರೇ ಇಲ್ಲವಂತೆ.
ಶಿಕ್ಷಕರ ಸಂಘ ಶೀಘ್ರ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಬೇಕು ಎಂದು ಒತ್ತಾಯಿಸುತ್ತಿದ್ದರೂ, ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ವರದಿಗಳು ಹೇಳಿವೆ.
ಪ್ರತಿಷ್ಠಿತ ಸಂಸ್ಥೆಗಳಾದ ಹಿಂದೂ ಕಾಲೇಜ್, ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್, ಕಿರೋರಿಮಲ್ ಕಾಲೇಜ್ ಮತ್ತು ಕಮ್ಲಾ ನೆಹರು ಕಾಲೇಜಿನಲ್ಲಿ ಪ್ರಾಂಶುಪಾಲರೂ ಇಲ್ಲ ಹಾಗೂ ಆ ಸ್ಥಾನಕ್ಕೆ ಯಾವ ಅಧಿಕಾರಿಗೂ ಚಾರ್ಜ್ ನೀಡಿಲ್ಲ. 
2008ರಿಂದಲೂ ಹಿಂದೂ ಕಾಲೇಜಿನಲ್ಲಿ ಪಾಂಶ್ರುಪಾಲರ ಹುದ್ದೆ ಹಾಗೇ ಖಾಲಿ. ಅಂದಿನಿಂದ ಈವರೆಗೆ ಪ್ರಾಂಶುಪಾಲರನ್ನು ನೇಮಕ ಮಾಡಿಲ್ಲ.
ಇನ್ನು ರಾಜಧಾನಿ ಕಾಲೇಜು, ಗಾರ್ಗಿ ಕಾಲೇಜು, ಇನ್ಸ್ ಟಿಟ್ಯೂಟ್ ಆಫ್ ಹೋಮ್ ಎಕಾನಾಮಿಕ್ಸ್, ದೇಶಬಂಧು ಕಾಲೇಜ್, ಭಾರತಿ ಕಾಲೇಜ್, ಅರ್ ಬಿಂದೋ ಕಾಲೇಜು ಮತ್ತು ಶ್ಯಾಮ ಪ್ರಸಾದ್ ಮುಖರ್ಜಿ ಕಾಲೇಜಗಳಲ್ಲಿ ತಾತ್ಕಾಲಿಕ ಪ್ರಾಂಶುಪಾಲರಿದ್ದಾರೆ. 
ವಿಶ್ವವಿದ್ಯಾಲಯಗಳಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ನೇಮಕಾತಿ ಪ್ರಕ್ರಿಯೆ ಸಂಪೂರ್ಣವಾಗಿ ಸ್ಥಗಿತವಾಗಿದೆ. ಈ ಸಂಬಂಧ ಅನೇಕ ಬಾರಿ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಸುಮಾರು 4000ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಪ್ರಾಂಶುಪಾಲ, ಶಿಕ್ಷಕರು ಸೇರಿದಂತೆ ಕಾಲೇಜು ಸಿಬ್ಬಂದಿ ಹುದ್ದೆಗಳು ಹಾಗೆ ಖಾಲಿ ಇವೆ ಎಂದು ದೆಹಲಿ ವಿಶ್ವವಿದ್ಯಾಲಯದ ಶಿಕ್ಷಕರ ಸಂಘ ಹೇಳಿದೆ. 
ಇನ್ನು ನೇಮಕಾತಿ ಪ್ರಕ್ರಿಯೆ ನಡುವೆ ವೇಳೆ, ಮೀಸಲಾತಿ ನಿಯಮಗಳನ್ನು ಪಾಲಿಸಲಾಗುತ್ತಿಲ್ಲ ಎಂದು ದೆಹಲಿ ವಿಶ್ವವಿದ್ಯಾಲಯದ ಎಸ್ ಸಿ ಎಸ್ ಟಿ ವೇದಿಕೆ ಸಂಚಾಲಕ ಹಂಸರಾಜ್ ಸಮಾನ್ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com