ಏರ್‌ಪೋರ್ಟ್‌ಗೆ ಬಂದ ಕನಯ್ಯಾ ಕುಮಾರ್‌ನ್ನೇ ಹೋಲುವ ಯುವಕನೊಬ್ಬ ತನಗೆ ವಿಂಡೋ ಸೀಟು ಬೇಕು ಎಂದು ಕೇಳಿದಾಗ ಅದು ಇಲ್ಲ ಎಂಬ ಉತ್ತರ ಸಿಗುತ್ತದೆ. ಅಷ್ಟಕ್ಕೆ ಸಿಟ್ಟಿಗೆದ್ದ ಯುವಕ ಭಾಯಿಯೋ ಬೆಹನೋ ಎಂದು ಹೇಳಿ ತನ್ನ ಭಾಷಣ ಶುರು ಮಾಡುತ್ತಾನೆ. ನಮಗೆ ನಮ್ಮ ಸೀಟು ಆಯ್ಕೆ ಮಾಡುವ ಸ್ವಾತಂತ್ರ್ಯ ಬೇಕು, ವಿಂಡೋ ಸೀಟು ಬೇಕೆಂದು ಕೇಳುವ ಸ್ವಾತಂತ್ರ್ಯ ಬೇಕು ಎಂದು ಹೇಳುವಾಗ, ಅಲ್ಲಿರುವ ಪ್ರಯಾಣಿಕರೆಲ್ಲರೂ ನಮಗೂ ಆಜಾದಿ ಬೇಕು ಎಂದು ಘೋಷಣೆ ಕೂಗುವ ದೃಶ್ಯಗಳು ಜಾಹೀರಾತಿನಲ್ಲಿದೆ.