ದಾರುಲ್ ಉಲೂಂ ಸಂಘಟನೆ ಸೂಕ್ಷ್ಮ ವಿಚಾರಗಳ ಬಗ್ಗೆ ಫತ್ವಾ ಹೊರಡಿಸುವುದನ್ನು ಬಿಡಲಿ: ಇಸ್ಲಾಮಿಕ್ ವಿದ್ವಾಂಸ

ಭಾರತ್ ಮಾತಾ ಕಿ ಜೈ ಘೋಷಣೆ ಕೂಗುವುದರ ವಿರುದ್ಧ ದಾರುಲ್ ಉಲೂಂ ಸಂಘಟನೆ ಹೊರಡಿಸಿರುವ ಫತ್ವಾ ಬಗ್ಗೆ ಇಸ್ಲಾಮಿಕ್ ವಿದ್ವಾಂಸರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಇಸ್ಲಾಮಿಕ್ ವಿದ್ವಾಂಸ ಖಾಲಿದ್ ರಶೀದ್ ಫರಂಗಿ ಮಹಲ್
ಇಸ್ಲಾಮಿಕ್ ವಿದ್ವಾಂಸ ಖಾಲಿದ್ ರಶೀದ್ ಫರಂಗಿ ಮಹಲ್

ಲಖನೌ: ಭಾರತ್ ಮಾತಾ ಕಿ ಜೈ ಘೋಷಣೆ ಕೂಗುವುದರ ವಿರುದ್ಧ ದಾರುಲ್ ಉಲೂಂ ಸಂಘಟನೆ ಹೊರಡಿಸಿರುವ ಫತ್ವಾ ಬಗ್ಗೆ ಇಸ್ಲಾಮಿಕ್ ವಿದ್ವಾಂಸರೊಬ್ಬರು ಪ್ರತಿಕ್ರಿಯೆ ನೀಡಿದ್ದು, ದಾರುಲ್ ಉಲೂಂ ನಂತಹ ಸಂಘಟನೆಗಳು ಸೂಕ್ಷ್ಮ ವಿಚಾರಗಳ ಕುರಿತು ಫತ್ವಾ ಹೊರಡಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.
ಸೂಕ್ಷ್ಮ ವಿಚಾರಗಳ ಕುರಿತು ಫತ್ವಾ ಹೊರಡಿಸುವುದು, ದೇಶ ಹಾಗೂ ಸಮುದಾಯದ ಮೇಲೆ ಅಪಾಯಕಾರಿ ಪರಿಣಾಮ ಬೀರುತ್ತದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯರೂ ಆಗಿರುವ ಇಸ್ಲಾಮಿಕ್ ವಿದ್ವಾಂಸ ಖಾಲಿದ್ ರಶೀದ್ ಫರಂಗಿ ಮಹಲ್ ಅಭಿಪ್ರಾಯಪಟ್ಟಿದ್ದಾರೆ.
ಎರಡೂ ಸಮುದಾಯಗಳಲ್ಲಿರುವ ಕೋಮುವಾದಿ ಶಕ್ತಿಗಳು ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಸೂಕ್ಷ್ಮ ವಿಚಾರಗಳನ್ನು ಪ್ರಸ್ತಾಪಿಸುತ್ತಿವೆ. ಅಂತಹ ಸೂಕ್ಷ್ಮ ವಿಚಾರಗಳ ಕುರಿತು ಯಾವುದೇ ಸಂಘಟನೆ ಫತ್ವಾ ಹೊರಡಿಸುವುದರಿಂದ  ಕೋಮುವಾದಿ ಶಕ್ತಿಗಳಿಗೆ ತಮ್ಮ ಗುರಿಯನ್ನು ಸಾಧಿಸುವುದು ಅನುಕೂಲವಾಗಲಿದೆ, ಫತ್ವಾ ಹೊರಡಿಸುವುದರಿಂದ ಅಂತಹವರಿಗೇಕೆ ಅನುಕೂಲ ಮಾಡಿಕೊಡಬೇಕು ಎಂದು ಫರಂಗಿ ಮಹಲ್ ಪ್ರಶ್ನಿಸಿದ್ದಾರೆ.  
ದೇಶಕ್ಕೆ ನಿಷ್ಠರಾಗಿದ್ದೇವೆ ಎಂದು ತೋರಿಸಲು ಯಾವುದೇ ರೀತಿಯ ಘೋಷಣೆ ಕೂಗುವುದನ್ನು ಸಂವಿಧಾನ ಕಡ್ಡಾಯ ಮಾಡಿಲ್ಲ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಮರು ಇನ್ಕಲಾಬ್ ಜಿಂದಾಬಾದ್, ಜೈ ಹಿಂದ್ ಎಂಬ ಘೋಷಣೆಗಳನ್ನು ಕೂಗಿದ್ದಾರೆ ಇದ್ದನ್ನು ಅನುವಾದ ಮಾಡಿದರೆ  ಭಾರತ್ ಮಾತಾ ಕಿ ಜೈ ಘೋಷಣೆಗೆ ಸಮಾನಾರ್ಥಕವಾಗಿದೆ ಎಂದು ಫರಂಗಿ ಮಹಲ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com