
ಮುಂಬೈ: ಬಾಲಿವುಡ್ ಕಿರುತೆರೆ ನಟಿ ಪ್ರತ್ಯೂಷ ಬ್ಯಾನರ್ಜಿ ಆತ್ಮಹತ್ಯೆ ಪ್ರಕರಣ ಕುರಿತು ಬಾಲಿವುಡ್ ಹಿರಿಯ ತಾರೆ, ಸಂಸದೆ ಹೇಮ ಮಾಲಿನಿ ಕೊಂಚ ಸಿಟ್ಟಿನಿಂದಲೇ ಪ್ರತಿಕ್ರಿಯೆ ನೀಡಿದ್ದಾರೆ.
ಅವರು ಟ್ವಿಟ್ಟರ್ ನಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು, ಜೀವನವನ್ನು ಸುಲಭವಾಗಿ ಪರಿಗಣಿಸಿ ವಿನಾಕಾರಣ ಆತ್ಮಹತ್ಯೆ ಮಾಡಿಕೊಳ್ಳುವವರ ವಿರುದ್ಧ ಹರಿಹಾಯ್ದಿದ್ದಾರೆ. ''ಇಂತಹ ಪ್ರಜ್ಞಾಶೂನ್ಯ ಆತ್ಮಹತ್ಯೆಗಳಿಂದ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಜೀವನ ಎಂದರೆ ನಮಗೆ ಜೀವನ ನಡೆಸಲು ದೇವರು ಕೊಟ್ಟ ಉಡುಗೊರೆ, ನಮ್ಮಿಷ್ಟ ಬಂದಂತೆ ಅದನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಆ ಹಕ್ಕು ನಮಗೂ ಇಲ್ಲ.'' ಎಂದು ಟ್ವೀಟ್ ಮಾಡಿದ್ದಾರೆ.
Advertisement