ನನ್ನಿಷ್ಟದ ಮಹಿಳಾ ಸಹ ಪೈಲಟ್ ಜತೆಗಿದ್ದರೆ ಮಾತ್ರ ವಿಮಾನ ಹಾರಿಸುತ್ತೇನೆ ಎಂದ ಪೈಲಟ್

ಬುಧವಾರ ಬೆಳಗ್ಗೆ 7 ಗಂಟೆಗೆ ವಿಮಾನ ಹೊರಡಲು ಸಮಯವಾದಾಗ, ಸಹ ಪೈಲಟ್ ಆಗಿ 'ಆಕೆ' ಇಲ್ಲದಿದ್ದರೆ ನಾನು ವಿಮಾನ ಹಾರಿಸುವುದಿಲ್ಲ...
ಏರ್ ಇಂಡಿಯಾ ವಿಮಾನ
ಏರ್ ಇಂಡಿಯಾ ವಿಮಾನ
ನವದೆಹಲಿ: ಏರ್ ಇಂಡಿಯಾ ಪೈಲಟ್ ಒಬ್ಬರು ನಾನು ಹೇಳಿದ ಮಹಿಳಾ ಪೈಲಟ್ ನನ್ನ ಜತೆಗಿದ್ದರೆ ಮಾತ್ರ ನಾನು ವಿಮಾನ ಹಾರಿಸುತ್ತೇನೆ ಎಂದು ಹಠ ಹಿಡಿದು ಪ್ರಯಾಣಿಕರನ್ನು ಮತ್ತು ವಿಮಾನ ಸಂಸ್ಥೆಯನ್ನು ಪೇಚಿಗೆ ಸಿಲುಕಿಸಿದ ಪ್ರಸಂಗ ವರದಿಯಾಗಿದೆ. 'ಆಕೆ' ಇಲ್ಲದೆ ವಿಮಾನ ಹಾರಿಸಲು ಪೈಲಟ್ ಸಿದ್ಧವಿಲ್ಲ. ಈತನ ಈ ಹಠದಿಂದಾಗಿ 110 ಪ್ರಯಾಣಿಕರು ಎರಡೂವರೆ ಗಂಟೆಗಳ ಕಾಲ ಕಾಯಬೇಕಾಗಿ ಬಂತು! 
ಬುಧವಾರ ಮಾಲೆ ಯಿಂದ ತಿರುವನಂತಪುರಂ ದಾರಿಯಾಗಿ ಚೆನ್ನೈಗೆ ಹೊರಡಬೇಕಿದ್ದ ಏರ್ ಇಂಡಿಯಾ ವಿಮಾನದಲ್ಲಿ ಈ ನಾಟಕೀಯ ಘಟನೆ ಸಂಭವಿಸಿದೆ.
ಏಐ 263/264ದ ಕಮಾಂಡರ್ ಬುಧವಾರ ತಾನು ವಿಮಾನ ಹಾರಿಸಬೇಕಿದ್ದರೆ ನನ್ನ ಸಹ ಪೈಲಟ್ ಆಗಿ 'ಆಕೆ'ಯೇ ಬೇಕು ಎಂದು ಮಂಗಳವಾರ ರೋಸ್ಟರ್ ಸೆಕ್ಷನ್‌ಗೆ ವಿನಂತಿ ಮಾಡಿದ್ದರು. ಆದರೆ ಇದು ಸಾಧ್ಯವಿಲ್ಲ, ಆಕೆಯನ್ನು ಈಗಾಗಲೇ ದೆಹಲಿ ವಿಮಾನದಲ್ಲಿ ನಿಯೋಜಿಸಲಾಗಿದೆ ಎಂದು ರೋಸ್ಟರ್ ಸೆಕ್ಷನ್ ಅಧಿಕಾರಿಗಳು ಹೇಳಿದ್ದರು.
ಒಂದು ವೇಳೆ ಆಕೆ ನನ್ನ ಜತೆಗೆ ಇಲ್ಲದೇ ಇದ್ದರೆ ನಾನು ಅನಾರೋಗ್ಯ ಎಂದು ಹೇಳಿ ರಜೆ ಹಾಕುತ್ತೇನೆ ಎಂದು ಕಮಾಂಡರ್ ಬೆದರಿಕೆಯನ್ನೂ ಒಡ್ಡಿದ್ದರು,.ಏತನ್ಮಧ್ಯೆ, ತನಗೆ ರಕ್ತದೊತ್ತಡ ಸಮಸ್ಯೆ ಇದೆ ಎಂದು ಹೇಳಿ ಮಂಗಳವಾರ ರಜೆ ಹಾಕಿದ ಕಮಾಂಡರ್ ಚಿಕಿತ್ಸೆಯನ್ನೂ ಪಡೆದು ನಂತರ ಎಂದಿನಂತೆ ಬುಧವಾರ ಕೆಲಸಕ್ಕೆ ಹಾಜರಾಗಿದ್ದರು.
ಬುಧವಾರ ಬೆಳಗ್ಗೆ 7 ಗಂಟೆಗೆ ವಿಮಾನ ಹೊರಡಲು ಸಮಯವಾದಾಗ, ಸಹ ಪೈಲಟ್ ಆಗಿ 'ಆಕೆ' ಇಲ್ಲದಿದ್ದರೆ ನಾನು ವಿಮಾನ ಹಾರಿಸುವುದಿಲ್ಲ ಎಂದು ಕಮಾಂಡರ್ ಹಠ ಹಿಡಿದಿದ್ದಾರೆ. 
ಈತನ ಈ ಹಠದಿಂದಾಗಿ ಪ್ರಯಾಣಿಕರು ಕಷ್ಟ ಅನುಭವಿಸಬೇಕಾಗಿ ಬಂತು. ಕೊನೆಗೆ ಅಧಿಕಾರಿಗಳ ಮಾತಿಗೆ ಮಣಿದ ಕಮಾಂಡರ್ 9.23ಕ್ಕೆ ವಿಮಾನ ಹಾರಿಸಿದರು.  
ಆಸಕ್ತಿಕರ ವಿಷಯ ಏನಪ್ಪಾ ಅಂದ್ರೆ, ಈ ಕಮಾಂಡರ್ ಒಂದು ವಾರಗಳ ಹಿಂದೆ ಕೆಲಸಕ್ಕೆ ರಾಜಿನಾಮೆ ನೀಡಿದ್ದು, ಈಗ 6 ತಿಂಗಳ ನೋಟಿಸ್ ಪಿರಿಯಡ್‌ನಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com